Headlines

ಕೆರೆ ಹಾವನ್ನು ಅಟ್ಟಾಡಿಸಿಕೊಂಡು ಬಂದು ಸೂಟ್ ಕೇಸ್ ನಲ್ಲಿ ಅವಿತು ಕುಳಿತ ಬೃಹತ್ ಕಾಳಿಂಗ ಸರ್ಪ

ಕೆರೆ ಹಾವನ್ನು ಅಟ್ಟಾಡಿಸಿಕೊಂಡು ಬಂದು ಸೂಟ್ ಕೇಸ್ ನಲ್ಲಿ ಅವಿತು ಕುಳಿತ ಬೃಹತ್ ಕಾಳಿಂಗ ಸರ್ಪ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ 11 ಅಡಿ ಉದ್ದದ ಕಾಳಿಂಗ ಸರ್ಪವೊಂದು ಮನೆಯೊಂದರಲ್ಲಿಟ್ಟಿದ್ದ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ. ಮನೆಯ ಟ್ರಂಕ್‌ನಲ್ಲಿದ್ದ ಹಾವನ್ನು ಕಂಡು ಗಾಬರಿಯಾದ ಮನೆಯವರು ಆ ಬಳಿಕ ಉರಗ ಸಂರಕ್ಷಕರ ಮೂಲಕ ಸರ್ಪವನ್ನು ಸುರಕ್ಷಿತವಾಗಿ ಹಿಡಿಸಿದ್ದಾರೆ..

ತೀರ್ಥಹಳ್ಳಿಯ ಊಂಟೂರುಕಟ್ಟೆ ಸಮೀಪದ ಕಟ್ಟೆಕೊಪ್ಪದ ಬಳಿ ಇರುವ ಮುನಿಯಮ್ಮ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಇವರ ಮನೆಯಲ್ಲಿದ್ದ ಟ್ರಂಕ್‌ನಲ್ಲಿ ಕಳೆದ ಭಾನುವಾರ ರಾತ್ರಿ ಹಾವು ಸೇರಿರುವುದು ಗೊತ್ತಾಗಿದೆ. ಕೇರೆ ಹಾವೊಂದನ್ನ ಅಟ್ಟಿಸಿಕೊಂಡು ಬಂದ ಕಾಳಿಂಗ ಮನೆಯೊಳಗೆ ನುಗ್ಗಿದೆ. ಆ ಬಳಿಕ ಭಯಗೊಂಡು ಅಲ್ಲಿಯೇ ಇದ್ದ ಸೂಟ್‌ಕೇಸ್‌ನೊಳಗೆ ಸೇರಿಕೊಂಡಿತ್ತು. ಇದರಿಂದ ಮನೆಯವರು ಗಾಬರಿಯಾದರು.

ಬಳಿಕ ಮನೆಯವರು ಉರಗ ಸಂರಕ್ಷಕ ಚಂದ್ರು ಹಾಗೂ ನರೇಶ್ ಅವರನ್ನಿ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಅವರು 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಅದನ್ನು ಬಿಡುಗಡೆ ಮಾಡಿದ್ದಾರೆ.

Leave a Reply

Your email address will not be published. Required fields are marked *