ಮದುವೆಯಾಗುವುದಾಗಿ ಅಪ್ರಾಪ್ತೆಗೆ ವಂಚನೆ – ಮನನೊಂದು ವಿಷ ಸೇವಿಸಿ ಆತ್ಮಹತ್ಯೆ | ಆರೋಪಿ ಅರೆಸ್ಟ್
ಅಪ್ರಾಪ್ತೆಯೊಬ್ಬಳೊಂದಿಗೆ ಕಳೆದ ಮೂರು ವರ್ಷಗಳಿಂದ ಸುತ್ತಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ ಈಗ ಜಾತಿಯ ಕಾರಣ ಹೇಳಿ ವಂಚಿಸಿದ ಹಿನ್ನಲೆಯಲ್ಲಿ ಮನನೊಂದು ಅಪ್ರಾಪ್ತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಡೆದಿದ್ದೇನು..!!??
ಕಳೆದ ಮೂರು ವರ್ಷಗಳಿಂದ 17 ವರ್ಷದ ಅಪ್ರಾಪ್ತೆಯೊಬ್ಬಳೊಂದಿಗೆ ಸುತ್ತಾಡಿಕೊಂಡು ಇದ್ದ ಆರೋಪಿ ಮದುವೆಯ ಪ್ರಸ್ತಾಪ ಬಂದಾಗ ಯುವತಿಯ ಜಾತಿ ಬಗ್ಗೆ ಕೀಳಾಗಿ ಮಾತನಾಡಿ ಮದುವೆಯಾಗುವುದಿಲ್ಲ ಎಂದಿದ್ದಾನೆ ಇದರಿಂದ ಮನನೊಂದ ಯುವತಿ ನ.19 ರಂದು ತನ್ನ ಮನೆಯಲ್ಲಿದ್ದ ವಿಷವನ್ನು ಸೇವಿಸಿದ್ದಾಳೆ.
ಕೂಡಲೇ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಮೃತಪಟ್ಟಿದ್ದಾಳೆ.
ಈ ಬಗ್ಗೆ ಅಪ್ರಾಪ್ತೆಯ ಪೋಷಕರು ನೀಡಿದ ದೂರಿನನ್ವಯ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.