w
Headlines
Home » ತೋಟಕ್ಕೆ ಹೋದ ಯುವಕ ತುಂಗಾ ನದಿಯಲ್ಲಿ ಶವವಾಗಿ ಪತ್ತೆ

ತೋಟಕ್ಕೆ ಹೋದ ಯುವಕ ತುಂಗಾ ನದಿಯಲ್ಲಿ ಶವವಾಗಿ ಪತ್ತೆ

N698147361176925988553808f3b7a43296bcc03d94d8a926ff0559b350ea3ea760f5542f5ceee54f7e2089

A 31-year-old man who left home to visit his farm went missing and was later found dead in the Tunga River in Thirthahalli taluk. Police have registered a case and launched an investigation into the incident.

ತೀರ್ಥಹಳ್ಳಿ:ಮನೆಯಿಂದ ತೋಟಕ್ಕೆ ಹೋಗುತ್ತೇನೆಂದು ಹೊರಟ ಯುವಕನೊಬ್ಬ ನಾಪತ್ತೆಯಾಗಿದ್ದು, ಮರುದಿನ ತುಂಗಾ ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ.

ಮೃತನನ್ನು ಕುರುವಳ್ಳಿ ಗ್ರಾಮದ ನಿವಾಸಿ ವಸಂತ (31) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:

ವಸಂತ ಅವರು ಗುರುವಾರ ಮಧ್ಯಾಹ್ನ ಮನೆಯಿಂದ ತೋಟಕ್ಕೆ ಹೋಗುವುದಾಗಿ ತಿಳಿಸಿ ಹೊರಟಿದ್ದರು. ಆದರೆ ರಾತ್ರಿ ವರೆಗೆ ಮನೆಗೆ ವಾಪಾಸ್ ಆಗದ ಕಾರಣ ಕುಟುಂಬಸ್ಥರು ಆತಂಕಗೊಂಡಿದ್ದರು. ಶುಕ್ರವಾರ ಬೆಳಗ್ಗೆ ಹುಣಸವಳ್ಳಿ ಸಮೀಪದ ಭೂವರಹ ದೇವಸ್ಥಾನದ ಬಳಿ ನದಿ ತೀರದಲ್ಲಿ ಚಪ್ಪಲಿಗಳು ಕಂಡುಬಂದಿರುವುದನ್ನು ಸ್ಥಳೀಯರು ಗಮನಿಸಿದ್ದು, ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿಗಳು ನದಿಯಲ್ಲಿ ತೀವ್ರ ಶೋಧ ಕಾರ್ಯ ನಡೆಸಿದಾಗ ವಸಂತ ಅವರ ಶವ ಪತ್ತೆಯಾಗಿದೆ.

ಪೊಲೀಸ್ ತನಿಖೆ:

ಘಟನಾ ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.