January 11, 2026

ಶ್ರದ್ದಾ ಭಕ್ತಿಯಿಂದ ನೆರವೇರಿದ ಸಂಭ್ರಮದ ಗೋಪೂಜೆ

GridArt_20241102_140617424.jpg

ರಿಪ್ಪನ್‌ಪೇಟೆ : ಇಂದು ಬಲಿಪಾಡ್ಯಮಿಯ ಅಂಗವಾಗಿ ರಿಪ್ಪನ್‌ಪೇಟೆಯ ವಿವಿದಢೆಯ ದೇವಸ್ಥಾನಗಳಲ್ಲಿ ಗೋಪೂಜೆಯನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಲಾಯಿತು.

ಪಟ್ಟಣದ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಗೋವುಗಳನ್ನು ಶೃಂಗರಿಸಿ ದೇವಸ್ಥಾನದ ಪ್ರದಾನ ಅರ್ಚಕ ವೇ.ಚಂದ್ರಶೇಖರ ಭಟ್ ಮತ್ತು ಗುರುರಾಜ್ ಭಟ್ ನೇತೃತ್ವದಲ್ಲಿ ಗೋ ಮಾತೆಗೆ ಬೆಲ್ಲ ಅಕ್ಕಿ ಬಾಳೆಹಣ್ಣು ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಸ್ಥಾನದ ಧರ್ಮದರ್ಶಿ ಆರ್.ಈ.ಈಶ್ವರಶೆಟ್ಟಿ, ಎಂ.ಡಿ.ಇಂದ್ರಮ್ಮ,ಗಣೇಶ್ ಎನ್.ಕಾಮತ್, ಎನ್.ಸತೀಶ್,ಸುಧೀಂದ್ರ ಪೂಜಾರಿ,ಲಿಂಗಪ್ಪ ಕಗ್ಗಲಿ, ಮೋಹನ್,ಜಯಲಕ್ಷಿ, ಕೆ.ಆರ್.ಭೀಮರಾಜ್‌ಗೌಡರು, ವೈ.ಜೆ.ಕೃಷ್ಣ, ರಾಘವೇಂದ್ರ ಆರ್.ಸರಸ್ವತಿ ರಾಘವೇಂದ್ರ,ಇನ್ನಿತರರು ಹಾಜರಿದ್ದರು.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಹಾಗೂ ಕುಟುಂಬಸ್ಥರು ಗೋ ಪೂಜೆ ನೆರವೇರಿಸಿದರು.
[ಹೊಸನಗರ ತಾಪಂ ಮಾಜಿ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ ಜಿ ಚಂದ್ರಮೌಳಿ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು.]
[ರಿಪ್ಪನ್ ಪೇಟೆ ಗ್ರಾಪಂ ಮಾಜಿ ಉಪಾಧ್ಯಕ್ಷ ರವೀಂದ್ರ ಕೆರೆಹಳ್ಳಿ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು]
[ರಿಪ್ಪನ್ ಪೇಟೆ ಗ್ರಾಪಂ ಸದಸ್ಯ ,ಬಿಜೆಪಿ ಶಕ್ತಿ‌ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುಂದರೇಶ್ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು]
[ಕುಕ್ಕಳಲೆಯ ಕೀರ್ತಿ ಗೌಡ ರವರ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು]
ರಿಪ್ಪನ್ ಪೇಟೆಯ ಚೌಡೇಶ್ವರಿ ಬೀದಿ ನಿವಾಸಿ ಶಶಿಕಲಾ ಬಸವರಾಜ್ ಮನೆಯವರು ಗೋಪೂಜೆ ಮಾಡಿ ಹಣ್ಣು ನೀಡುತ್ತಿರುವುದು.
ಹುಂಚ ಗ್ರಾಮದ ಅಭಿಷೇಕ್ ಕುಟುಂಬಸ್ಥರು ಗೋಪೂಜೆ ನೆರವೇರಿಸಿದರು

About The Author

Leave a Reply

Your email address will not be published. Required fields are marked *