ಗುರುಶಕ್ತಿ ಸಾರಿಗೆ ಸಂಸ್ಥೆ ಮಾಲೀಕರುಗಳಿಗೆ ನೌಕರರಿಂದ ಸನ್ಮಾನ
ಮಲೆನಾಡ ಭಾಗದಲ್ಲಿ ಸಾರಿಗೆ ಕ್ಷೇತ್ರದಲ್ಲಿ ಕಳೆದ 34 ವರ್ಷಗಳಿಂದ ತನ್ನದೇ ಆದ ಸಾಮ್ರಾಜ್ಯವನ್ನು ಕಟ್ಟಿ ನೂರಾರು ಕಾರ್ಮಿಕರಿಗೆ ಆಸರೆಯಾಗಿರುವ ಹೊಸನಗರ ತಾಲೂಕಿನ ಹೆಮ್ಮೆಯ ಗುರುಶಕ್ತಿ ಸಾರಿಗೆ ಸಂಸ್ಥೆಯ ಮಾಲೀಕರುಗಳಿಗೆ ದೀಪಾವಳಿ ಹಬ್ಬದ ಅಂಗವಾಗಿ ಕಾರ್ಮಿಕರು ಸನ್ಮಾನಿಸಿ ಗೌರವಿಸಿದ್ದಾರೆ.
ಹೌದು ಸಾರಿಗೆ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದ ಜನತೆಯ ಜೀವನದ ಭಾಗವಾಗಿರುವ ಗುರುಶಕ್ತಿ ಸಾರಿಗೆ ಸಂಸ್ಥೆ ಮಾರಣಾಂತಿಕ ಕೋವಿಡ್ , ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟದಿಂದ ನಲುಗಿದ್ದರು ಅವನತಿಯತ್ತ ಸಾಗಿದ್ದರು ಈ ಸಂಸ್ಥೆ ಮಾಲೀಕರ ಶ್ರಮದಿಂದ ನೂರಾರು ಕಾರ್ಮಿಕರಿಗೆ ಆಸರೆಯಾಗಿ ನಿಂತಿದೆ.
ದೀಪಾವಳಿ ಹಬ್ಬದ ಅಂಗವಾಗಿ ಶನಿವಾರ ಸಂಸ್ಥೆಯ ವಾಹನಗಳಿಗೆ ಪೂಜೆ ಸಲ್ಲಿಸಿದ ಸಂಸ್ಥೆಯ ನೌಕರರು ಕಾರಣಗಿರಿಯಲ್ಲಿರುವ ಗುರುಶಕ್ತಿ ಸಾರಿಗೆ ಸಂಸ್ಥೆ ಮಾಲೀಕರ ಮನೆಗೆ ತೆರಳಿ ಮಾಲೀಕರುಗಳಾದ ನಾಗರಾಜರಾವ್,ಪ್ರಭಾಕರ ರಾವ್ , ಪ್ರಕಾಶ ರಾವ್, ವಿದ್ಯಾಧರ್ ರವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದ್ದಾರೆ. ಇದು ಈ ಸಂಸ್ಥೆಯ ಮಾಲೀಕರು ಹಾಗೂ ಕಾರ್ಮಿಕರ ನಡುವೆ ಇರುವಂತಹ ಗಟ್ಟಿ ಸಂಬಂಧವನ್ನು ಪ್ರಚುರಪಡಿಸಿದೆ.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಗುರುಶಕ್ತಿ ಸಾರಿಗೆ ಸಂಸ್ಥೆಯ ಮಾಲೀಕರು ಹಾಗೂ ಶಿಮೂಲ್ ಅಧ್ಯಕ್ಷ ವಿದ್ಯಾದರ್ 1990 ರಲ್ಲಿ ಪ್ರಾರಂಭವಾದ ಈ ಸಂಸ್ಥೆಯನ್ನು ನೌಕರರು ಹಾಗೂ ಪ್ರಯಾಣಿಕರು ಅತ್ಯಂತ ಪ್ರೀತಿಯಿಂದ ಬೆಳೆಸಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಂಸ್ಥೆಯನ್ನಾಗಿಸಿದ್ದಾರೆ. ಒಂದು ಸಂಸ್ಥೆ ಯಶಸ್ವಿಯಾಗಬೇಕಾದಲ್ಲಿ ನೌಕರರು ಹಾಗೂ ಸಾಹುಕಾರರ ನಡುವೆ ಉತ್ತಮ ಬಾಂಧವ್ಯ ಇರಬೇಕಾಗುತ್ತದೆ ಅದನ್ನು ನೀವು ಸಾಬೀತುಪಡಿಸಿದ್ದೀರಿ ಇಂತಹ ಸಂಸ್ಥೆಯನ್ನು ಮುನ್ನಡೆಸುತ್ತಿರುವದಕ್ಕೆ ನನಗೆ ಹೆಮ್ಮೆ ಇದೆ ಎಂದರು.
ಪ್ರಯಾಣಿಕರೊಂದಿಗೆ ನಾವು ಸೌಮ್ಯವಾಗಿ ನಡೆದುಕೊಳ್ಳುವುದರಿಂದ ಅವರ ಹಾರೈಕೆಯಿಂದ ಸಂಸ್ಥೆ ಇನ್ನಷ್ಟು ಅಭಿವೃದ್ದಿಯಾಗುತ್ತದೆ ಆ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಮೇಶ್ ಶೆಟ್ಟಿ , ರಫಿಕ್ ನೊಣಬೂರು, ವೀರೇಂದ್ರ . ಗಣಪತಿ.ಶಿವಪ್ರಕಾಶ್. ನಾಗರಾಜ. ಸಂತೋಷ್ ಅನೀಸ್ , ಅಕ್ರಮ್,ಸಿರಾಜ್, ವಿಜಯ, ರಾಮಪ್ಪ , ದಿನೇಶ್, ಶಶಿಕುಮಾರ್,ಶಿವಕುಮಾರ್ ಇನ್ನಿತರರಿದ್ದರು