RIPPONPETE | ಜಯಘೋಷಗಳೊಂದಿಗೆ ಐತಿಹಾಸಿಕ ಹಿಂದೂ ರಾಷ್ಟ್ರ ಸೇನಾ ಗಣಪತಿ ಪ್ರತಿಷ್ಠಾಪನೆ
ರಿಪ್ಪನ್‌ಪೇಟೆ : ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ ಸೇನಾ ಸಮಿತಿಯ 57 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಗಣೇಶ ಮೂರ್ತಿಯನ್ನು ಸಮಿತಿಯವರು ಶಿವಮೊಗ್ಗ ರಸ್ತೆಯ ವಿದ್ಯಾ ನಗರದಿಂದ ಮೆರವಣಿಗೆ ಮೂಲಕ ಕರೆತಂದು ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಿ ಮಹಾ ಮಂಗಳಾರತಿ ತೀರ್ಥಪ್ರಸಾದ ನೆರವೇರಿತು.
ವಿದ್ಯಾ ನಗರದಿಂದ ವಿನಾಯಕ ವೃತ್ತದವರೆಗೂ ಮೆರವಣಿಗೆ ಮೂಲಕ ಗಣೇಶ ಮೂರ್ತಿಯನ್ನು ಕರೆತಂದು ವಿನಾಯಕ ವೃತ್ತದಲ್ಲಿ ಹಿಂದೂ ಭಗವಧ್ವಜಾರೋಹಣ ನೆರವೇರಿಸಿ ಗಣಪತಿ ದೇವಸ್ಥಾನದ ಹಿಂಭಾಗದ ಭೂಪಾಳಂ ಚಂದ್ರಶೇಖರಯ್ಯ ಸಭಾ ಭವನದ ತಿಲಕ ಮಂಟಪದಲ್ಲಿ ಪ್ರತಿಷ್ಟಾಪನಾ ಪೂಜೆ ನೆರವೇರಿಸಲಾಯಿತು.
ವಿನಾಯಕ ವೃತ್ತದಲ್ಲಿ ಹಿಂದೂ ಭಗವಾಧ್ವಜವನ್ನು ಟಿ ಆರ್ ಕೃಷ್ಣಪ್ಪ ಮತ್ತು ರಥೇಶ್ವರಪ್ಪ ಗೌಡರವರು ದ್ವಜಾರೋಹಣ ನೆರವೇರಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ 57ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ ಮತ್ತು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟಸೇನಾ ಸಮಿತಿಯ ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ದೇವಸ್ಥಾನ ಸಮಿತಿ ಅಧ್ಯಕ್ಷ ಈಶ್ವರಶೆಟ್ಟಿ, ಎನ್.ಸತೀಶ್, ಜಯಲಕ್ಷ್ಮಿ, ಸುಧೀಂದ್ರ ಪೂಜಾರಿ, ತೀರ್ಥೇಶ್ ಅಡಿಕಟ್ಟು, ಲಕ್ಷ್ಮಣ ಬಳ್ಳಾರಿ, ಶೈಲಾ ಆರ್.ಪ್ರಭು, ಶ್ರೀನಿವಾಸ್, ಆಟೋ ಲಕ್ಷ್ಮಣ, ಸುಧೀರ್ ಪಿ.ಕಗ್ಗಲಿ ಲಿಂಗಪ್ಪ, ಕೆ.ಗಣೇಶ್‌ಪ್ರಸಾದ್, ಮಾಲ್ಗೂಡಿ ಶೇಖರ್, ಹೆಚ್.ಎನ್.ಚೋಳರಾಜ್, ನಾಗರಾಜ ಪವಾರ್, ಈಶ್ವರ ಮಳಕೊಪ್ಪ, ಭೀಮರಾಜ್, ಹೆಚ್.ಎನ್.ಉಮೇಶ್, ಪ್ರಕಾಶ್‌ಶೆಟ್ಟಿ, ಎಸ್.ದಾನಪ್ಪ, ಯೋಗೀಶ್, ಶ್ರೀನಿವಾಸ್‌ಆಚಾರ್, ಹೆಚ್.ಎನ್.ಉಮೇಶ್, ಶ್ರೀಧರ, ಆರ್.ರಾಘವೇಂದ್ರ, ಮುರುಳಿಧರ ಕೆರೆಹಳ್ಳಿ, ರವೀಂದ್ರ ಕೆರೆಹಳ್ಳಿ, ವಾಸುಶೆಟ್ಟರು ಗವಟೂರು, ಕೆ.ಎ.ನಾರಾಯಣ ಬೇಕರಿ, ವೈ.ಜೆ.ಕೃಷ್ಣ, ಸಂತೋಷ, ಸುಹಾಸ್, ರಂಜನ್, ಚಿಪ್ಪಳ್ಳಿ ರಾಘವೇಂದ್ರ, ಡಿ.ಈ.ರವಿಭೂಷಣ, ಸಂದೀಪಶೆಟ್ಟಿ, ಮಂಜುನಾಥ ಆಚಾರ್, ಪ್ರಶಾಂತ್, ಮಂಜುನಾಥ, ಭಾಸ್ಕರ್‌ಶೆಟ್ಟಿ, ಚಂದ್ರ ಡ್ರೈವರ್ ಮಲ್ಲಾಪುರ ಇನ್ನಿತರರು, ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.