ಆನಂದಪುರ: ಮೂರು ದಿನಗಳ ಹಿಂದೆ ಪೋಸ್ಟ್ ಮ್ಯಾನ್ ನ್ಯೂಸ್ ಸಾಗರ ತಾಲ್ಲೂಕು ಆನಂದಪುರದ ಪೊಲೀಸ್ ವಸತಿ ಗೃಹಗಳು ಪಾಳುಬಿದ್ದಿವೆ ಎಂದು ಸುದ್ದಿ ಪ್ರಸಾರ ಮಾಡಿತ್ತು.ಈ ಜಾಗ ಅಕ್ರಮ ಚಟುವಟಿಕೆಗಳ ತಾಣವೂ ಆಗಿತ್ತು .ಬಾನೆತ್ತರಕ್ಕೆ ಗಿಡಗಂಟಿಗಳು ಬೆಳೆದಿತ್ತು ಎಂದು ಸುದ್ದಿ ಪ್ರಸಾರ ಮಾಡಿದ ಬೆನ್ನಲ್ಲೇ ಇದೀಗ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡಿದ್ದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇದೀಗ ಜಾಗವನ್ನು ಸ್ವಚ್ಛಗೊಳಿಸಿ ಗಿಡಗಂಟಿಗಳನ್ನು ಕಡಿದು ಇದೀಗ ಆ ಜಾಗಕ್ಕೆ ಹೊಸ ಕಳೆ ನೀಡುತ್ತಿದ್ದಾರೆ.
ವಸತಿ ಗೃಹದ ಒಳಗಡೆಯೂ ಸಹ ಸ್ವಚ್ಚಗೊಳಿಸಿ ಹೊರಗಡೆಯಿಂದ ಬೀಗ ವನ್ನು ಹಾಕಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಪೋಸ್ಟ್ ಮ್ಯಾನ್ ನ್ಯೂಸ್ ಸುದ್ದಿ ಮಾಡಿದ ಫಲಶ್ರುತಿಗೆ ಇದೀಗ ಆ ಜಾಗ ಹೊಸ ಕಳೆಯೊಂದಿಗೆ ಅಕ್ರಮ ಚಟುವಟಿಕೆಯ ತಾಣದಿಂದ ಮುಕ್ತಿ ಆಗುತ್ತಿರುವುದು ನಿಜಕ್ಕೂ ನಮ್ಮ ಹೆಮ್ಮೆಯ ಗರಿ.
ವರದಿ : ಪವನ್ ಕುಮಾರ್, ಕಠಾರೆ
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..