ರಿಪ್ಪನ್ ಪೇಟೆ : ರೋಟರಿ ಕ್ಲಬ್ ರಿಪ್ಪನ್ ಪೇಟೆ ಮತ್ತು ಡೆಸ್ಟಿನಿ ಸ್ಕೂಲ್ ಆಫ್ ಡ್ಯಾನ್ಸ್ ಇವರ ಸಹಯೋಗದಲ್ಲಿ ಪಟ್ಟಣದ ರಾಷ್ಟೋತ್ಥಾನ ಶಿಶು ಮಂದಿರದಲ್ಲಿ ಇಂದು ಡೆಸ್ಟಿನಿ ಡ್ಯಾನ್ಸ್ ತರಬೇತಿ ಶಾಲೆಯನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ ಕೇತಾರ್ಜಿ ರಾವ್ ಮುಂದಿನ ದಿನಗಳಲ್ಲಿ ನೃತ್ಯ ತಂಡಗಳು ಉಳಿಯಬೇಕಾದರೆ ಕೊರಿಯೋಗ್ರಾಫರ್ ಗಳ ಸಹಕಾರ ಅತ್ಯಗತ್ಯ. ಫಿಟ್ನೆಸ್ ಗೆ ನೃತ್ಯ ಅತಿ ಅವಶ್ಯಕ ಆದ್ದರಿಂದ ಡೆಸ್ಟಿನಿ ಸ್ಕೂಲ್ ಆಫ್ ಡ್ಯಾನ್ಸ್ ಇದರ ಸದುಪಯೋಗವನ್ನು ಎಲ್ಲಾರೂ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಪ್ಪನ್ ಪೇಟೆ ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೋ ಪಿಎಚ್ಎಫ಼್ ನಾಗಭೂಷಣ್ ವಹಿಸಿದ್ದರು.ನಂತರ ಮಾತನಾಡಿದ ಅವರು ಎಲ್ಲಾ ವಿದ್ಯಾರ್ಥಿಗಳು ಸಂಪೂರ್ಣ ಆಸಕ್ತಿಯೊಂದಿಗೆ ಭಾಗವಹಿಸಿದಾಗ ಮಾತ್ರ ಗುರುಗಳಿಂದ ಕಲಿತು ಯಶಸ್ವಿಯಾಗಬಹುದು, ಅದೇ ರೀತಿ ನೃತ್ಯ, ಸಂಗೀತದ ಮೂಲಕ ವೇದಿಕೆಯತ್ತ ಮುನ್ನುಗ್ಗಬಹುದು ಹಾಗೂ ವಿದ್ಯಾರ್ಥಿಗಳ ಬೆಳವಣಿಗೆಗೆ ವಿಪುಲ ಅವಕಾಶಗಳಿದ್ದು ಅವುಗಳನ್ನು ಬಳಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಭಾಗವಹಿಸಿ ಜಿಲ್ಲೆಯನ್ನು ಗುರುತಿಸುವಂತಾಗಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಕೋರಿಯೋಗ್ರಾಫರ್ ಗಳಾದ ಅವಿನಾಶ್ ಎನ್,ಧೃವ ಮಂಡಗದ್ದೆ,ರಾಷ್ಟ್ರೋತ್ಥಾನ ಶಿಶು ಮಂದಿರದ ಅಧ್ಯಕ್ಷರಾದ ಕೆ ರತ್ನಾಕರ ರಾವ್, ರೋಟರಿಯನ್ ರಾಧಾಕೃಷ್ಣ ಜೆ, ವರ್ತೆಶ್ ಹೆಚ್ ಎಂ, ತಾನಾರಾಮ್,ಡಾಕಪ್ಪ ಎಂ,ದಿವಾಕರ, ಜಯಂತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಡ್ಯಾನ್ಸ್ ತರಬೇತಿಗೆ ಪಾಲ್ಗೊಳ್ಳಲು ಆಸಕ್ತರು ಈ ಸಂಖ್ಯೆಗೆ ಸಂಪರ್ಕಿಸಿ :
ಧೃವ : 8867269560
ಅವಿನಾಶ್ : 7795535939
ವರದಿ : ದೇವರಾಜ್ ಆರಗ