January 11, 2026

ಅಂದಾಸುರದ ಮೇಲಿನಕೇರಿ ವೃತ್ತಕ್ಕೆ ಪುನೀತ್ ರಾಜ್‍ಕುಮಾರ್ ಹೆಸರಿಟ್ಟು ಗೌರವ ಸೂಚಿಸಿದ ಗ್ರಾಮಸ್ಥರು :

ಅಂದಾಸುರ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅಂದಾಸುರ ಮೇಲಿನ ಕೇರಿಗೆ ವೃತ್ತಕ್ಕೆ ಪುನೀತ್ ರಾಜ್‍ಕುಮಾರ್ ನಗರ ಎಂದು ನಾಮಕರಣ ಮಾಡಲಾಗಿದೆ.ಅಂದಾಸುರದ ಓಂ ಫ್ರೆಂಡ್ಸ್ ಯುವಕ ಸಂಘದವರು ಇಲ್ಲಿನ ಮೇಲಿನಕೇರಿಯ ವೃತ್ತಕ್ಕೆ ಪುನೀತ್ ರಾಜಕುಮಾರ್ ವೃತ್ತ ಎಂದು ಹೆಸರು ಹಾಕಿ ನಾಮಪಲಕ ಪ್ರತಿಷ್ಟಾಪಿಸಿದ್ದಾರೆ.

ಈ ಸಂಧರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಖೈರಾ ಅಧ್ಯಕ್ಷರಾದ ರಾಜಣ್ಣ ,ಸೋಮೇಶ ಗ್ರಾಪಂ ಸದಸ್ಯರು ಆಚಾಪುರ,ಶಿಕ್ಷಕರಾದ ಇಂದಿರಾ,ವಕೀಲರಾದ ದಾಸನಕೊಪ್ಪ ವಾಸು,ವೀಣಾ ಹಾಗೂ ಗ್ರಾಮಸ್ಥರೆಲ್ಲಾ ಉಪಸ್ಥಿತರಿದ್ದರು.
ಮಲೆನಾಡಿನಾದ್ಯಂತ ಕನ್ನಡದ ಮೇರುನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರವರ ಹೆಸರನ್ನು ಅನೇಕ ವೃತ್ತ ಹಾಗೂ ಸರ್ಕಲ್ ಗೆ ನಾಮಕರಣ ಮಾಡುವುದರ ಮೂಲಕ ಮಲೆನಾಡಿಗರು ಪುನೀತ್ ರವರಿಗೆ ಗೌರವ ಸೂಚಿಸಿದ್ದಾರೆ. 

About The Author

Leave a Reply

Your email address will not be published. Required fields are marked *