Headlines

ಶಿವಮೊಗ್ಗದಲ್ಲಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಫ್ಲೆಕ್ಸ್​ ಕಿತ್ತವನಿಗೆ ಬಿತ್ತು ‌ಗೂಸಾ

ಶಿವಮೊಗ್ಗ: ಪವರ್ ಸ್ಟಾರ್, ಕರ್ನಾಟಕ ರತ್ನ ದಿ. ಪುನೀತ್ ರಾಜಕುಮಾರ್ ಅವರ ಫ್ಲೆಕ್ಸ್​ ಕಿತ್ತು ಹಾಕಿದವನಿಗೆ ಜನರು ಗೂಸಾ ನೀಡಿದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.

ನಗರದ ನೆಹರು ಕ್ರೀಡಾಂಗಣದಲ್ಲಿ ಪುನೀತ್​ ನೆನಪಿಗಾಗಿ ರಾಷ್ಟ್ರಮಟ್ಟದ ಫುಟ್​ಬಾಲ್​ ಪಂದ್ಯಾವಳಿಯನ್ನು ಜನವರಿ 7 ರಿಂದ 9 ರವರೆಗೆ ಆಯೋಜಿಸಲಾಗಿದೆ. ಇದಕ್ಕಾಗಿ ಕ್ರೀಡಾಂಗಣದ ಮುಖ್ಯದ್ವಾರದ ಮುಂಭಾಗ ಪುನೀತ್​ ರಾಜಕುಮಾರ್​ ಅವರ ಬೃಹತ್​ ಫ್ಲೆಕ್ಸ್​ ಹಾಕಲಾಗಿತ್ತು.

ಈ ವೇಳೆ ಆನಂದ್​ ಎಂಬಾತ ಕುಡಿದ ಮತ್ತಿನಲ್ಲಿ ಪುನೀತ್​ರ ಫ್ಲೆಕ್ಸ್​ ಅನ್ನು ಹರಿದು ತೆಗೆದುಕೊಂಡು ಹೋಗುತ್ತಿದ್ದ. ಇದನ್ನು ಕಂಡ ಆಯೋಜಕರು ಆತನಿಗೆ ಧರ್ಮದೇಟು ನೀಡಿದ್ದಾರೆ. ಪುನೀತ್​ ಅವರ ಫ್ಲೆಕ್ಸ್​ ರೂಪಿಸಲು 15 ಸಾವಿರ ರೂಪಾಯಿ ಖರ್ಚು ಮಾಡಲಾಗಿತ್ತು.

ಇದನ್ನು ಕಿತ್ತುಹಾಕಿದ ಕಿಡಿಗೇಡಿ ಆನಂದ್​ನನ್ನು ಹಿಡಿದು ಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಆನಂದ್​ನನ್ನು ಪೊಲೀಸರು ಬುದ್ಧಿ ಹೇಳಿ ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *