ರಾಜ್ಯದ ಮೂಲಭೂತ ಅಭಿವೃದ್ಧಿಗೆ ಒತ್ತು ನೀಡದೇ, ರೈತರ ಸಾಲದ ಯೋಜನೆಯನ್ನು ಹೆಚ್ಚಿನ ರೈತರಿಗೆ ವಿಸ್ತರಿಸದೇ ರೈತರ ಪರ ಬಜೆಟ್ ಎಂದು ಪ್ರತಿಪಾದಿಸುವ ಬರೀ ಸುಳ್ಳಿನ ಲೆಕ್ಕಚಾರದ ಪೊಳ್ಳು ಹಾಗೂ ನಿರಾಶದಾಯಕ ಬಜೆಟ್ ಆಗಿದೆ ಎಂದು ಜಾತ್ಯಾತೀತ ಜನತಾದಳದ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ, ಕೈಗಾರಿಕಾ ಇಲಾಖೆ, ಕೃಷಿ, ಶಿಕ್ಷಣ, ನೀರಾವರಿ ಯಂತಹ ಪ್ರಮುಖ ವಲಯಗಳಲ್ಲಿ ಯಾವುದೇ ಹೊಸ ಯೋಜನೆ ರೂಪಿಸಿರುವುದಿಲ್ಲ.ವಿಧವೆ ಮತ್ತು ವಯೋವೃದ್ಧರಿಗೆ ಕನಿಷ್ಠ 1ಸಾವಿರಕ್ಕೂ ಹೆಚ್ಚು ಅನುದಾನ ಏರಿಸಿರುವುದಿಲ್ಲ.
ಮೇಕೆದಾಟು ಯೋಜನೆ, ತುಂಗಭದ್ರಾ ನದಿಯ ಹೂಳೆತ್ತುವ ಯೋಜನೆ ಮುಂತಾದ ಯೋಜನೆಗಳಿಗೆ ನಿಗದಿ ಪಡಿಸಿರುವ ಹಣ ಕಾಟಾಚಾರದ್ದಾಗಿದೆ. ಅದರಲ್ಲಿ ಈಗಾಗಲೇ 2 ಯೋಜನೆ ನ್ಯಾಯಾಲಯದಲ್ಲಿ ಮತ್ತು ಟ್ರಿಬ್ಯುನಲ್ ನಲ್ಲಿ ಅದು ತೀರ್ಮಾನವಾಗುವವರೆಗೂ ಹಣ ಬಿಡುಗಡೆ ಮಾಡಲು ಕಾನೂನು ಪ್ರಕಾರ ಬರುವುದಿಲ್ಲವೆಂದು ಗೊತ್ತಿದ್ದರೂ ಬಜೆಟ್ ನಲ್ಲಿ ಹಣ ಇಟ್ಟಿರುವುದು ಇದೊಂದು ಕಣ್ಣೊರೆಸುವ ತಂತ್ರವಾಗಿದೆ.
ಕೋವಿಡ್ ನಿಂದ ಸಂಕಷ್ಟದಲ್ಲಿರುವ ಜನರಿಗೆ ಯಾವುದೇ ಅನುಕೂಲವಿಲ್ಲ ಜೊತೆಗೆ ಕೋವಿಡ್ ಸಮಯದಲ್ಲಿ ಮೃತಪಟ್ಟ ರೈತರ ಸಾಲವನ್ನು ಮನ್ನಾ ಮಾಡಿಲ್ಲ.ಈ ಬಜೆಟ್ ರೈತರ ಆದಾಯವನ್ನು ದ್ವಿಗುಣ ಮಾಡುತ್ತದೆ ಎಂದು ಹೇಳುವ ಸರ್ಕಾರ ಇದರ ಬಗ್ಗೆ ಯಾವುದೇ ಘೋಷಣೆಯನ್ನು ಮಾಡಿಲ್ಲ ಹೀಗಾಗಿ ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ ಎಂದು ಹೇಳಿದರು