Headlines

ರಿಪ್ಪನ್ ಪೇಟೆಯಲ್ಲಿ ಹಾಡಹಗಲೇ ಮಹಿಳೆಯ ಸರಗಳ್ಳತನ :

ರಿಪ್ಪನ್‌ಪೇಟೆ : ಪಟ್ಟಣದ ಶಿವಮೊಗ್ಗ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಜನನಿಬಿಡ ಪ್ರದೇಶದಲ್ಲಿಯೋ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ  ಸರವನ್ನು ಇಬ್ಬರು ಯುವಕರು ಕಸಿದುಕೊಂಡು ಹೋಗಿರುವ ಘಟನೆ ನಡೆದಿದೆ.


ಪಟ್ಟಣದ ಶಿವಮೊಗ್ಗ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಸಣ್ಣ ದಿನಸಿ ಅಂಗಡಿ ಇಟ್ಟುಕೊಂಡಿರುವ ಜಯಮ್ಮ ಎಂಬುವವರು  ಸರ ಕಳೆದು ಕೊಂಡವರು.

ನಡೆದಿದ್ದೇನು ???

ಇಂದು ಸಂಜೆ 4.30 ರ ಸಮಯ ಜಯಮ್ಮ ರವರು ತಮ್ಮ ಮೈಲಾರಲಿಂಗೇಶ್ವರ ಜನರಲ್ ಸ್ಟೋರ್ ನಲ್ಲಿ ಒಬ್ಬರೇ ಇದ್ದಾಗ ಕೆಟಿಎಂ ಡ್ಯೂಕ್ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ನೀರನ್ನು ಕೇಳಿದ್ದಾರೆ ಜಯಮ್ಮರವರು ನೀರುಕೊಡುತ್ತಿದ್ದಂತೆ ಏಕಾಏಕಿ ದಾಳಿ ಮಾಡಿದ ಯುವಕ ಕುತ್ತಿಗೆಗೆ ಕೈ ಹಾಕಿ ಸರವನ್ನು ಎಳೆದು ಕ್ಷಣಮಾತ್ರದಲ್ಲಿ ಪರಾರಿಯಾಗಿದ್ದಾರೆ.  ಈ ಸಂದರ್ಭದಲ್ಲಿ ಗಾಬರಿಗೊಳಗಾಗದೆ ಜೋರಾಗಿ ಕೂಗಿಕೊಂಡ ಹಿನ್ನೆಲೆಯಲ್ಲಿ ಅಕ್ಕಪಕ್ಕದವರನ್ನು ಸೇರಿದ್ದಾರೆ ಅಷ್ಟರಲ್ಲಾಗಲೇ ಕೆಟಿಎಂ ಡ್ಯೂಕ್ ಬೈಕ್ ನಲ್ಲಿ ಬಂದಿದ್ದ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಸುಮಾರು ಅರುವತ್ತು ಸಾವಿರ ರೂ ಮೌಲ್ಯದ 12 ಗ್ರಾಂ ಚಿನ್ನದ ಸರ ಕಳೆದುಕೊಂಡಿದ್ದೇನೆ ಎಂದು ಜಯಮ್ಮ ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದಾರೆ.ಕುತ್ತಿಗೆಗೆ  ಕೈ ಹಾಕಿ ಎಳೆದ ರಭಸಕ್ಕೆ ಮಾಂಗಲ್ಯಸರ ಎರಡು ತುಂಡಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ 

ಇತ್ತೀಚೆಗೆ ಸಾಗರದಲ್ಲಿ ಶಿಕ್ಷಕಿಯ ಸರ ಅಪಹರಣ ಮಾಡಿರುವ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದ್ದು ಮಲೆನಾಡಿಗರಲ್ಲಿ ಆತಂಕ ಸೃಷ್ಟಿಸಿದೆ.


ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇


Leave a Reply

Your email address will not be published. Required fields are marked *