w
Headlines
Home » ಶರಾವತಿ ಹಿನ್ನಿರಿನಲ್ಲಿ ಸರಾಗವಾಗಿ ಈಜುತ್ತಿದ್ದ ಯುವಕ ಸ್ವಿಮ್ಮಿಂಗ್ ಫೂಲ್ ನಲ್ಲಿ ಮುಳುಗಿ ಸಾವು :

ಶರಾವತಿ ಹಿನ್ನಿರಿನಲ್ಲಿ ಸರಾಗವಾಗಿ ಈಜುತ್ತಿದ್ದ ಯುವಕ ಸ್ವಿಮ್ಮಿಂಗ್ ಫೂಲ್ ನಲ್ಲಿ ಮುಳುಗಿ ಸಾವು :

ಶಿವಮೊಗ್ಗದ ಸಿಂಹಧಾಮದ ಬಳಿ ಇರುವ ಖಾಸಗಿ  ಈಜುಕೊಳದಲ್ಲಿ ಈಜಲು ಹೋದ ಯುವಕನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ. 

ಸ್ನೇಹಿತರೊಂದಿದೆ ಈಜಲು ಹೋಗಿದ್ದ ಅನಿಲ್ ಕುಮಾರ್ ಎಂಬ ಯುವಕ ಶವವಾಗಿ ಪತ್ತೆಯಾಗಿದ್ದಾನೆ. 

ಈತನ ಸಾವಿನ ಬಗ್ಗೆ ಆತನ ಕುಟುಂಬ ವರ್ಗದಿಂದ ಅನುಮಾನ ವ್ಯಕ್ತವಾಗಿದೆ. ಹೊಸನಗರದ ಶರಾವತಿ ಹಿನ್ನೀರಿನಲ್ಲಿ ಸರಾಗವಾಗಿ ಈಜುಹೊಡೆಯುವ ಅನಿಲ್ ಕುಮಾರ್ ಈಜುಕೊಳದಲ್ಲಿ ಶವವಾಗಿ ಪತ್ತೆಯಾಗಿರುವುದಕ್ಕೆ ಕುಟುಂಬ ಅನುಮಾನ ವ್ಯಕ್ತಪಡಿಸಿದೆ.

ಶಿವಮೊಗ್ಗದ ಸಿಂಹಧಾಮದ ಹಿಂಭಾಗದಲ್ಲಿ ಬರುವ ಕರಣ್ ಸ್ವಿಮ್ಮಿಂಗ್ ಫೂಲ್ ನಲ್ಲಿ ಅನಿಲ್ ಕುಮಾರ್ ನಿನ್ನೆ ಸ್ವಿಮ್ಮಿಂಗ್ ಫೂಲ್ ನಲ್ಲಿ ಈಜುವಾಗ ನೀರಿನಲ್ಲಿ ಮುಳುಗಿ ಅನಿಲ್ ಕುಮಾರ್ ಶವವಾಗಿ ಪತ್ತೆಯಾಗಿದ್ದಾನೆ.


ಗ್ರಾಮಾಂತರ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇಂದು ಮಧ್ಯಾಹ್ನ ಶಿವಮೊಗ್ಗದ ಮೆಗ್ಗಾನ್ ನಲ್ಲಿ ಶವ ಪರೀಕ್ಷೆ ನಡೆದಿದೆ. ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.