ಆಯನೂರು ಬಳಿ ಬೈಕ್ ಹಾಗೂ ಪಿಕಪ್ ವಾಹನದ ನಡುವೆ ಭೀಕರ ಅಪಘಾತವಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಧಾರುಣ ಸಾವುಕಂಡಿದ್ದಾನೆ.
ಆಯನೂರು ಸಮೀಪದ ವಿಠಗೊಂಡನಕೊಪ್ಪ ಗ್ರಾಮದ ಆಕಾಶ್ (20) ಮೃತ ದುರ್ದೈವಿಯಾಗಿದ್ದಾನೆ. ಶಿವಮೊಗ್ಗದ ಆಯನೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆ ಇದಾಗಿದೆ.
ಶಿವಮೊಗ್ಗದಿಂದ ಆಯನೂರಿನ ಕಡೆ ಬೈಕ್ ನಲ್ಲಿ ತೆರಳುತ್ತಿದ್ದ ಆಕಾಶ್ ಆಯನೂರು ಸಮೀಪದ ವೀರಗಾರನ ಬೈರನಕೊಪ್ಪದ ಬಳಿ ಕೋಳಿ ಸಾಗಿಸುತ್ತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದ ಪರಿಣಾಮ ಆಕಾಶ್ ಸ್ಥಳದಲ್ಲಿಯೇ ಸಾವುಕಂಡಿದ್ದಾನೆ.
ಅಪಘಾತದ ರಭಸಕ್ಕೆ ಆಕಾಶ್ ತಲೆ, ಕಾಲು ಸಂಪೂರ್ಣ ಛಿದ್ರವಾಗಿದೆ. ಶಿವಮೊಗ್ಗದ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.