Headlines

ರಿಪ್ಪನ್ ಪೇಟೆ ಸಮೀಪದಲ್ಲಿ ಟಿಪ್ಪರ್ ಲಾರಿ ಅಪಘಾತ : ತಪ್ಪಿದ ಭಾರೀ ಅನಾಹುತ

ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು ಅಪಘಾತವಾದ ಘಟನೆ ರಿಪ್ಪನ್ ಪೇಟೆ ಸಮೀಪದ ಶೆಟ್ಟಿಬೀಡು ಗ್ರಾಮದಲ್ಲಿ ನಡೆದಿದೆ.

ಹೊಸನಗರದಿಂದ ರಿಪ್ಪನ್ ಪೇಟೆಗೆ ತೆರಳುತ್ತಿದ್ದ KA55 3809 ಟಿಪ್ಪರ್ ಲಾರಿಯು ಶೆಟ್ಟಿಬೀಡು ಸಮೀಪದಲ್ಲಿ ಬ್ರೇಕ್ ಜಾಮ್ ಆಗಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ  ಧರೆಗೆ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ನ ಮುಂಭಾಗ ನಜ್ಜುಗುಜ್ಜಾಗಿದೆ.ಅದೃಷ್ಟವಶಾತ್ ಚಾಲಕನಿಗೆ ಯಾವುದೇ  ಗಂಭೀರ ಗಾಯಗಳಾಗಿಲ್ಲ.


ಶೆಟ್ಟಿಬೀಡು ಕ್ರಾಸ್ ನಲ್ಲಿ ಬ್ರೇಕ್ ಜಾಮ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯು ರಸ್ತೆಯ ಬಲಭಾಗದಲ್ಲಿ ಬಂದ ಪರಿಣಾಮ ಎದುರಿಗೆ ಬಂದ  ಕಾರ್ ಗೆ ಡಿಕ್ಕಿ ಆಗುವ ಸಂಭವವಿತ್ತು ಆದರೆ ಟಿಪ್ಪರ್ ಚಾಲಕನ ಚಾಕಚಕ್ಯತೆಯಿಂದ ನಡೆಯಬೇಕಾಗಿದ್ದ ಭಾರೀ ದೊಡ್ಡ ಅನಾಹುತ ತಪ್ಪಿದೆ.

ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

About The Author

Leave a Reply

Your email address will not be published. Required fields are marked *