ರಿಪ್ಪನ್ಪೇಟೆ :ಟ್ರ್ಯಾಕ್ಟರ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪ್ಪನ್ ಪೇಟೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಂಗಳವಾರ ರಾತ್ರಿ ಇಬ್ಬರು ಅರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 
ಬಂಧಿತ ಅರೋಪಿಗಳು ಆನಂದಪುರದ ದಾಸನಕೊಪ್ಪ ವಾಸಿ ಸಂದೀಪ (30) ಹಾಗೂ ಟ್ರ್ಯಾಕ್ಟರ್ ಚಾಲಕ ಹಾವೇರಿ ಜಿಲ್ಲೆಯ ಗುಡ್ಡಪ್ಪ (28) ಎನ್ನಲಾಗಿದೆ. 
ಶನಿವಾರದಂದು ಸಾಗರ ರಸ್ತೆಯ ವಡಗೆರೆಯ ವೆಂಕಪ್ಪ ಶೆಟ್ಟಿ ಅವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳ್ಳತನವಾಗಿತ್ತು. 
ಈ ಪ್ರಕರಣದ ಪ್ರಮುಖ ಆರೋಪಿ ವಡಗೆರೆ –ಚಂದಾಳದಿಂಬದ ವಾಸಿ ಪ್ರತಾಪ್ಸಿಂಗ್ ಮಂಗಳವಾರ ಬೆಳಿಗ್ಗೆ ಠಾಣೆಯಿಂದ ಪರಾರಿಯಾಗಿದ್ದ ಆತನ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಈ ಇಬ್ಬರು ಅರೋಪಿಗಳು ಸೆರೆ ಸಿಕ್ಕಿದ್ದಾರೆ. 
ತಲೆ ಮರೆಸಿಕೊಂಡಿರುವ ಪ್ರಮುಖ ಅರೋಪಿ ಪ್ರತಾಪ್ಸಿಂಗ್ನನ್ನು ಅತೀ ಶೀಘ್ರದಲ್ಲಿಯೇ ಬಂಧಿಸುವುದಾಗಿ ಪಿಎಸ್ಐ ಶಿವಾನಂದ ಕೋಳಿ ತಿಳಿಸಿದ್ದಾರೆ.
		 
                         
                         
                         
                         
                         
                         
                         
                         
                         
                        