ರಿಪ್ಪನ್ ಪೇಟೆ: ಪಟ್ಟಣದಲ್ಲಿ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಖಾಸಗಿ ಶಾಲೆಯೊಂದು ತನ್ನ ವಿದ್ಯಾ ಸಂಸ್ಥೆಯ ಪ್ರತಿಷ್ಠೆಗಾಗಿ 9ನೇ ತರಗತಿಯಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿರುವ ಮಕ್ಕಳನ್ನು 9ನೇ ತರಗತಿಯಲ್ಲಿ ಅನುತ್ತೀರ್ಣ ಗೊಳಿಸಿ ಕಲಿಕೆಯಲ್ಲಿ ಮುಂದಿರುವ ಮಕ್ಕಳನ್ನು 10 ನೇ ತರಗತಿಗೆ ದಾಖಲಿಸಿಕೊಂಡು ಪ್ರತಿಶತ ನೂರು ಫಲಿತಾಂಶವನ್ನು ಪಡೆಯುತ್ತಿದೆ ಎಂಬ ಆರೋಪ ಪೋಷಕ ವಲಯದಲ್ಲಿ ಕೇಳಿಬಂದಿದೆ.
ೋಷಕರಿಂದ 1 ರಿಂದ 9ನೇ ತರಗತಿ ತನಕ ಸಾವಿರಾರು ರೂಪಾಯಿಗಳ ಶುಲ್ಕವನ್ನು ಪಡೆದುಕೊಂಡು 9ನೇ ತರಗತಿ ತನಕ ತಮ್ಮ ಸಂಸ್ಥೆಯಲ್ಲಿ ಶಿಕ್ಷಣ ನೀಡಿ 9ನೇ ತರಗತಿ ಯಲ್ಲಿ ಸ್ವಲ್ಪ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಅನುತ್ತೀರ್ಣ ಗೊಳಿಸಿ ಎಸೆಸೆಲ್ಸಿಯಲ್ಲಿ ಬುದ್ಧಿವಂತ ಮಕ್ಕಳನ್ನು ಇಟ್ಟುಕೊಂಡು ಪ್ರತಿಶತ 100% ಫಲಿತಾಂಶ ಪಡೆದು ಸಾರ್ವಜನಿಕರಲ್ಲಿ ಒಳ್ಳೆಯ ಭಾವನೆ ಮೂಡಿಸಿ ಸಾವಿರಾರು ರೂಪಾಯಿ ಹಣ ವಸೂಲಿ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಜಿಲ್ಲಾದ್ಯಂತ ನಾಲ್ಕೈದು ವಿದ್ಯಾ ಸಂಸ್ಥೆ ನಡೆಸುತ್ತಿರುವ ಈ ಖಾಸಗಿ ವಿದ್ಯಾಸಂಸ್ಥೆ ಹೆಸರಿಗೆ ದಾಖಲಾತಿ ಸಮಯದಲ್ಲಿ ವಿವಿಧ ಆಮಿಷಗಳನ್ನು ಒಡ್ಡಿ ಮಕ್ಕಳನ್ನು ದಾಖಲಾತಿ ಮಾಡಿಸಿಕೊಂಡು ಕೊನೆಹಂತದಲ್ಲಿ ಮಕ್ಕಳ ಭವಿಷ್ಯಕ್ಕೆ ಕೊಡಲಿಪೆಟ್ಟು ನೀಡುತ್ತಿರುವುದು ಮಕ್ಕಳನ್ನು ಮಾನಸಿಕವಾಗಿ ಬ್ಲಾಕ್ ಮೇಲ್ ಮಾಡುವುದು ಎಷ್ಟು ಸರಿ ಎಂಬುದೇ ಪೋಷಕರ ಪ್ರಶ್ನೆಯಾಗಿದೆ.
ವಿದ್ಯೆಯೆಂದರೆ ಸರ್ವರಿಗೂ ನೀಡಬೇಕಾಗಿದ್ದು ಏನೂ ಇಲ್ಲದ ವಿದ್ಯಾರ್ಥಿಯನ್ನು ಕಲಿಕೆಯಲ್ಲಿ ತೊಡಗಿಸಿ ವಿದ್ಯಾರ್ಥಿಯನ್ನು ಉತ್ತಮ ಪ್ರಜೆಯನ್ನಾಗಿ ಮಾಡಿ ಹಿಂದುಳಿದ ಮಕ್ಕಳನ್ನು ಮುಂದೆ ತಂದು ನಿಲ್ಲಿಸಬೇಕಾಗಿತ್ತು. ಜೊತೆಗೆ ಆ ವಿದ್ಯಾರ್ಥಿಗಳಿಗೂ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತಿರ್ಣ ಗೊಳಿಸಿದರೆ ಮಾತ್ರ ಅದು ನಿಜವಾದ ನಿಸ್ವಾರ್ಥ ಶಾಲೆ ಆದರೆ ಅದಕ್ಕೆ ಅಪಾರ್ಥ ಎಂಬಂತೆ ಶಿಕ್ಷಣ ಎಂದರೆ ಹಣಕಾಸಿನ ಧಂದೆ ಎಂದು ತಿಳಿದುಕೊಂಡಿರುವ ಖಾಸಗಿ ಶಾಲೆಯು ಈ ಸುಸಂಸ್ಕೃತ ಊರಿಗೆ ಕಪ್ಪುಚುಕ್ಕೆಯಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತನಾಡಿಕೊಳ್ಳುತಿದ್ದಾರೆ.
ಶಾಲೆಯ ದಾಖಲಾತಿ ಸಂಧರ್ಭದಲ್ಲಿ ಮುಗ್ಧ ಪೋಷಕರಿಗೆ ನುರಿತ ಶಿಕ್ಷಕರು ಕಾರ್ಯನಿರ್ವಹಿಸುವ ಶಾಲೆ ಎಂದು ಜಾಹೀರಾತಿನಲ್ಲಿ ಪ್ರಕಟಿಸಿ ನಂತರ ಪಿಯುಸಿ,ಡಿಗ್ರಿ ಪಾಸಾದವರನ್ನು ಕರೆತಂದು ಮೂರು ನಾಲ್ಕು ಸಾವಿರ ಸಂಬಳಕ್ಕೆ ಬಳಸಿಕೊಂಡು ಕಳಪೆ ಮಟ್ಟದ ಶಿಕ್ಷಣ ಕೊಡುವಲ್ಲಿ ಈ ವಿದ್ಯಾ ಸಂಸ್ಥೆ ಎತ್ತಿದ ಕೈ ಎನ್ನಲಾಗುತ್ತಿದೆ.
ಸಿರಿವಂತರ ಮಕ್ಕಳೇ ಹೆಚ್ಚಾಗಿ ದಾಖಲಾಗುತ್ತಿರುವ ಖಾಸಗಿ ಶಾಲೆಯಲ್ಲಿ ಭವಿಷ್ಯದ ಕನಸು ಕಂಡು ದಾಖಲಾದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡದೆ ಭವಿಷ್ಯವನ್ನು ಕತ್ತಲಲ್ಲಿ ಇಡುವ ಇಂತಹ ಶಿಕ್ಷಣ ಸಂಸ್ಥೆ ಅದೆಂತಹ ನೈತಿಕ ಶಿಕ್ಷಣ ನೀಡಬಹುದು ಎಂಬುದು ಸಾರ್ವಜನಿಕರ ಯಕ್ಷಪ್ರಶ್ನೆಯಾಗಿದೆ.

““ಒಟ್ಟಾರೆಯಾಗಿ ಬುದ್ದಿವಂತ ಮಕ್ಕಳನ್ನು ಮಾತ್ರ ಸೇರಿಸಿಕೊಂಡು 100% ತೆಗೆಯುವ ಖಾಸಗಿ ಶಾಲೆಗಳಿಗಿಂತ ಎಲ್ಲಾ ತರಹದ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡು ಅವರನ್ನು ತಿದ್ದಿ ತೀಡಿ ನೈತಿಕ ಶಿಕ್ಷಣ ನೀಡುವ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಶಿಕ್ಷಕರೇ ಉತ್ತಮ ಅಲ್ವಾ…!!!””