w
Headlines
Home » ಆನಂದಪುರದ ಮಧ್ಯ ರಸ್ತೆಯಲ್ಲಿ ಲಾಂಗ್ ಝಳಪಿಸಿದ ಯುವಕ , ಸ್ಥಳೀಯರಿಂದ ಧರ್ಮಧೇಟು : ಅಷ್ಟಕ್ಕೂ ಅಲ್ಲಿ ನಡೆದದ್ದೇನು..?? Crime News

ಆನಂದಪುರದ ಮಧ್ಯ ರಸ್ತೆಯಲ್ಲಿ ಲಾಂಗ್ ಝಳಪಿಸಿದ ಯುವಕ , ಸ್ಥಳೀಯರಿಂದ ಧರ್ಮಧೇಟು : ಅಷ್ಟಕ್ಕೂ ಅಲ್ಲಿ ನಡೆದದ್ದೇನು..?? Crime News

ಆನಂದಪುರದ ಮಧ್ಯ ರಸ್ತೆಯಲ್ಲಿ ಲಾಂಗ್ ಝಳಪಿಸಿದ ಯುವಕ , ಸ್ಥಳೀಯರಿಂದ ಧರ್ಮಧೇಟು : ಅಷ್ಟಕ್ಕೂ ಅಲ್ಲಿ ನಡೆದದ್ದೇನು..?? Crime News


ಆನಂದಪುರ : ಇಲ್ಲಿನ ಹೆದ್ದಾರಿಯಲ್ಲೆ ಯುವಕನೊಬ್ಬ ಲಾಂಗ್‌ ಝಳಪಿಸಿ ಹೆದರಿಸಿದ್ದು ಇದರಿಂದ ಜನರು ಆತಂಕಗೊಂಡ ಘಟನೆ ನಡೆದಿದೆ. 

ಆನಂದಪುರದ ಹೆದ್ದಾರಿಯಲ್ಲಿ ಯುವಕನೊಬ್ಬ ಲಾಂಗ್‌ ಹಿಡಿದು ರೋಡಲ್ಲಿ ಬೀಸಿದ್ದಾನೆ.  ವೆಹಿಕಲ್‌ಗಳ ಮೇಲೆ ಆತ ಲಾಂಗ್‌ ಬೀಸಿದ್ದಾನೆ ಎನ್ನಲಾಗಿದೆ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಈ ಹೈಡ್ರಾಮಾ ನಡೆದಿದೆ ಎನ್ನಲಾಗುತಿದ್ದು,ಇದರಿಂದ ರಸ್ತೆಯಲ್ಲಿ ಪ್ರಯಾಣಿಸುತಿದ್ದ ವಾಹನ ಮಾಲೀಕರು ಕೆಲಕಾಲ ಆತಂಕಗೊಂಡಿದ್ದಾರೆ.

ಮದುವೆ ಮನೆಯ ಗಲಾಟೆ ವಿಕೋಪಕ್ಕೆ ತೆರಳಿದೆ ಎನ್ನಲಾಗುತಿದ್ದು ಈ ಗಲಾಟೆ ಬೆನ್ನಲ್ಲೆ ಯುವಕರ ಕಡೆಯ ಇನ್ನೊಬ್ಬ ಯುವಕ ಆನಂದಪುರಕ್ಕೆ ಬಂದಿದ್ದಾನೆ. ಅಲ್ಲದೆ ಆನಂದಪುರ ಆಸ್ಪತ್ರೆಯ ಮುಂಭಾಗದಲ್ಲಿ ಕುಲುಮೆ ವ್ಯಾಪಾರಸ್ಥರು ಮಾರಾಟಕ್ಕೆ ಇಡಲಾಗಿದ್ದ ಲಾಂಗ್‌ ನ್ನು ಹಿಡಿದು ಅಲ್ಲಿದ್ದವರ ಮೇಲೆ ಬೀಸಲು ಆರಂಭಿಸಿದ್ದಾರೆ. 


ಸಾಗರ ಮೂಲದ ಯುವಕನಿಂದ ಈ ಕೃತ್ಯವೊಂದು ನಡೆದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ರಂಪಾಟ ನಡೆಸಿದ್ದಾನೆ. ಸ್ಥಳೀಯರಿಂದ ಯುವಕನಿಗೆ ಗೂಸ ಬಿದ್ದಿದ್ದು, ಲಾಂಗ್ ಕಿತ್ತು ಕೆರೆಗೆ ಎಸೆದಿದ್ದಾರೆ.

ಯುವಕನ ಬಂಧನವಾಗಿದ್ದು ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ. ಈ ದೃಶ್ಯದಿಂದ ರಸ್ತೆಯಲ್ಲಿ ಸಾಗುತ್ತಿರುವ ವಾಹನಸವಾರರು ಬೆಚ್ಚಿಬಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್,  ಆನಂದಪುರಂನಲ್ಲಿ ನಡೆದಿದ್ದ ಮದುವೆಯಲ್ಲಿ ಸಮೀರ್ ಮತ್ತು ಶಿವ ಎಂಬುವರು ಭಾಗಿಯಾಗಿದ್ದರು. ಶಿವ ಎಂಬುವನು ಸಾರ್ವಜನಿಕ ಸ್ಥಳದಲ್ಲಿ ಕಿರಿಕ್ ಮಾಡಿದ್ದರಿಂದ ಸುತ್ತಮುತ್ತಲಿನ ಜನ ಬೈದಿದ್ದಾರೆ.ಈ ಹಿನ್ನಲೆಯಲ್ಲಿ ತನ್ನ ಸ್ನೇಹಿತ ಸಮೀರ್ ಎಂಬುವನಿಗೆ ಕರೆ ಮಾಡಿ ಕರೆಸಿದ್ದಾನೆ. ಸಮೀರ್ ಬರುವಾಗ ಸ್ಥಳದಲ್ಲಿ ಬಳ್ಳಾರಿ ಮುಲದ ಕುಲುಮೆಯಲ್ಲಿರುವ ಲಾಂಗು ಹಿಡಿದು ಝಳಪಿಸಿದ್ದಾನೆ. ಸಾರ್ವನಿಕರು ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇವರಿಬ್ಬರು ಗಲಾಟೆ ಮಾಡಲು ಕಾರಣವೇನು ಎಂಬುದು ತನಿಖೆ ನಡೆಸಲಾಗುತ್ತಿದೆ. ಯುವಕರು ನಶೆಯಲ್ಲಿದ್ದರಾ? ಎಂಬುದನ್ನೂ ತಪಾಸಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.