ತೀರ್ಥಹಳ್ಳಿ : ತಾಲೂಕಿನ ಮಾಳೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿರುವ ಶಿವಮೊಗ್ಗ – ತೀರ್ಥಹಳ್ಳಿಯ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ಇತಿಹಾಸ ಪ್ರಸಿದ್ದ ಆಂಜನೇಯ ದೇವಸ್ಥಾನ ಸರ್ಕಾರದ ಯಾವುದೇ ಸೌಲಭ್ಯವಿಲ್ಲದೆ ನಶಿಸುತ್ತಿದೆ.
ಆಂಜನೇಯ ದೇವಸ್ಥಾನದಲ್ಲಿ ಪ್ರತಿದಿನ ಪೂಜೆ ಏನೋ ನೆಡೆಯುತ್ತಿದೆ. ಆದರೆ ಸರ್ಕಾರದಿಂದ ಯಾವುದೇ ಸೌಲಭ್ಯ ಕೂಡ ದೇವಸ್ಥಾನಕ್ಕೆ ದೊರಕುತ್ತಿಲ್ಲ. ಚುನಾವಣೆ ಸಮಯದಲ್ಲಿ ದೇವಸ್ಥಾನಕ್ಕೆ ಹಲವು ಬಾರಿ ಈಗಿನ ಗೃಹ ಸಚಿವರು ಅದ ಆರಗ ಜ್ಞಾನೇಂದ್ರ ಮತ್ತು ಮಾಜಿ ಶಾಸಕರು ಆಗಿರುವ ಕಿಮ್ಮನೆ ರತ್ನಾಕರ್ ಭೇಟಿ ನೀಡಿದ ದೇವಸ್ಥಾನವನ್ನು ಸುಧಾರಣೆಪಡಿಸುವುದಾಗಿ ಭರಪೂರ ಭರವಸೆ ನೀಡುತ್ತಾರೆಯೇ ಹೊರತು ಯಾವುದೇ ರೀತಿಯ ಪ್ರಯೋಜನ ಆಗಿಲ್ಲ.
ಹಲವಾರು ವರ್ಷಗಳ ಇತಿಹಾಸವಿರುವ ಈ ಆಂಜನೇಯ ದೇಗುಲವನ್ನು ಅಭಿವೃದ್ಧಿ ಪಡಿಸುವಲ್ಲಿ ಸ್ಥಳೀಯ ರಾಜಕಾರಣಿಗಳಿಗೂ ಮನಸಿದ್ದಂತೆ ಇಲ್ಲ.ಕೇವಲ ಚುನಾವಣ ಸಮಯದಲ್ಲಿ ಮಾತ್ರ ನೀಡುವ ಭರವಸೆ ಕೇಳಿ ಕೇಳಿ ಇಲ್ಲಿನ ಜನರು ಬೇಸತ್ತು ಹೋಗಿದ್ದಾರೆ.
ಕಣ್ಣು ಮುಚ್ಚಿ ಕುಳಿತಿರುವ ಮುಜರಾಯಿ ಇಲಾಖೆ !?
ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಸಂಬಂಧಪಟ್ಟಿದ್ದರು ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳು ಈ ಬಗ್ಗೆ ಗಮನವಹಿಸಿಲ್ಲ. ಕೇವಲ ಹುಂಡಿ ಹಣ ಸಂಗ್ರಹಿಸಲು ಓಡೋಡಿ ಬರುವ ಅಧಿಕಾರಿಗಳಿಗೆ ದೇವಸ್ಥಾನವನ್ನು ಅಭಿವೃದ್ಧಿ ಪಡಿಸುವಲ್ಲಿ ಏನೋ ಒಂಥರಾ ಆಲಸ್ಯ!!!!! ಅಧಿಕಾರಿಗಳಿ ಈ ದೇವಸ್ಥಾನದ ಸಮಸ್ಯೆ ಬಗೆಹರಿಸುವ ಹುಮ್ಮಸ್ಸು ಯಾಕಿಲ್ಲ ಎಂಬ ಪ್ರೆಶ್ನೆ ಅಲ್ಲಿನ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ದೇವಸ್ಥಾನದ ಅರ್ಚಕರಿಗೆ ಇಲ್ಲಿಯವರೆಗೆ ಸಂಬಳ ಎನ್ನುವುದೇ ಇಲ್ಲ !
ದೇವಸ್ಥಾನದಲ್ಲಿ ಪ್ರತಿದಿನ ಪೂಜೆ ಮಾಡುವ ಅರ್ಚಕರಿಗೆ ಇಲ್ಲಿಯವರೆಗೆ ಸಂಬಳ ಎನ್ನುವುದೇ ಇಲ್ಲವಂತೆ. ಅದನ್ನು ಕೇಳಲು ಹೋದರೆ ಅದರ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡುವುದಿಲ್ಲ ಎಂದು ಹೇಳುತ್ತಾರೆ. ದೇವಸ್ಥಾನದ ಹುಂಡಿಯ ಹಣ ಬೇಕು, ಪೂಜೆ ಮಾಡಲು ಅರ್ಚಕರು ಬೇಕು, ಅವರಿಗೆ ಸಂಬಳ ಕೊಡಲು ಮುಜರಾಯಿ ಇಲಾಖೆಗೆ ಯೋಗ್ಯತೆ ಇಲ್ಲವೇ ಎಂದು ದೇವಸ್ಥಾನದ ಸಮಸ್ಯೆ ಬಗ್ಗೆ ಇಲ್ಲಿನ ಭಕ್ತಾಧಿಗಳು ಮಾತನಾಡಿಕೊಳ್ಳುತಿದ್ದಾರೆ.
ವರದಿ : ಅಕ್ಷಯ್ ಕುಮಾರ್