Headlines

ಆಗುಂಬೆ ಸಮೀಪದ ಗುಡ್ಡೇಕೇರಿಯಲ್ಲಿ ಬೈಕ್ ಗೆ ಕಾರು ಡಿಕ್ಕಿ : ಪಿಗ್ಮಿ ಸಂಗ್ರಹಕ ಸುನೀಲ್ ಸಾವು

ತೀರ್ಥಹಳ್ಳಿ ಸಮೀಪದ ಗುಡ್ಡೇಕೇರಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಈ ಅಪಘಾತದಲ್ಲಿ ಕೈಮರದ ಸೊಸೈಟಿಯ ಪಿಗ್ಮಿ ಸಂಗ್ರಾಹಕ ಸುನೀಲ್ ಸಾವು ಕಂಡಿದ್ದಾರೆ.


ಕೈಮರದಿಂದ ಗುಡ್ಡೇಕೇರಿಗೆ ಬೈಕ್ ನಲ್ಲಿ ಹೋಗುತ್ತಿದ್ದ ಸುನೀಲ್ ಗೆ ಮಂಗಳೂರಿನಿಂದ ಶಿವಮೊಗ್ಗ ಕಡೆ ಹೋಗುತ್ತಿದ್ದ ಬೊಲೇನೋ ಕಾರು ಡಿಕ್ಕಿ ಹೊಡೆದಿದೆ. ಮುಖಾಮುಖಿ ಅಪಘಾತದಲ್ಲಿ ಕಾರಿನ ಮುಂಭಾಗ ಹಾನಿಯಾಗಿದೆ. ಬೈಕ್ ನುಜ್ಜುಗುಜ್ಜಾಗಿದೆ. ಗಾಯಾಳು ಸುನೀಲ್ ಗೆ ತೀವ್ರತರನಾದ ಗಾಯಗಳಾಗಿದ್ದು ಸ್ಥಳೀಯರೇ ಆತನನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವಾಗ ಸುನೀಲ್ ಮಾರ್ಗ ಮಧ್ಯದಲ್ಲಿ ಅಸುನೀಗಿದ್ದಾರೆ.

ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. bh

About The Author

Leave a Reply

Your email address will not be published. Required fields are marked *