ಅಮ್ಮನ ಜೊತೆಗೆ ಹಂದಿ ಅಣ್ಣಿಯ ಕೊನೆಯ ಸ್ಟೆಪ್ ಜೋಗಿ ಚಿತ್ರದ ನೆನಪನ್ನು ಮರುಕಳಿಸುವಂತಿದೆ…!!!.ವೀಡಿಯೋ ವೈರಲ್…..

ಜಗತ್ತಿನಲ್ಲಿ ಹುಟ್ಟುವ ಮೊದಲೇ ನಮ್ಮನ್ನು ಪ್ರೀತಿಸುವ ಯಾವುದಾದರೂ ಜೀವವೊಂದಿದ್ದರೆ ಅದು ಅಮ್ಮ ಮಾತ್ರ.

ನವಮಾಸ ಹೊತ್ತು ತನ್ನ ರಕ್ತವನ್ನೆ ಬಸಿದು ತನಗಾದ ನೋವನ್ನು ನುಂಗಿ ಜಗತ್ತಿನ ಅಷ್ಟು ಸುಖವು ಸಿಕ್ಕ ಕ್ಷಣವೆಂದು ಸಂತೋಷದೊಂದಿಗೆ ಮಗುವಿಗೆ ಜನ್ಮ ನೀಡುತ್ತಾಳೆ ಅಮ್ಮ. ಇವಳಿಗಿಂತ   ಪ್ರತ್ಯಕ್ಷವಾದ ದೇವರು ಬೇರೆ ಇರಲು ಸಾಧ್ಯವೆ? ಅಮ್ಮನ ವಾತ್ಸಲ್ಯ , ಮಮತೆ ಅಪಾರವಾದದ್ದು . ಅಮ್ಮ ತನ್ನೆಲ್ಲಾ ಕಷ್ಟ – ನೋವುಗಳನ್ನು ಒಡಲಲ್ಲೆ ಅವಿತಿಟ್ಟುಕೊಂಡು ತನ್ನ ಮಕ್ಕಳ ನಗುವಿನಲ್ಲಿ  ಮರೆಯುತ್ತಾಳೆ. ತನ್ನ ಮಕ್ಕಳ ಸುಖಕ್ಕಾಗಿ ಹಗಲಿರುಳು ದುಡಿಯುತ್ತಾಳೆ. ಮಕ್ಕಳು ತಪ್ಪು ಮಾಡಿದರೆ ತಿದ್ದುತ್ತಾಳೆ. ಮಕ್ಕಳು ಮತ್ತೆ ಮತ್ತೆ ತಪ್ಪು ಮಾಡಿದರು ನನ್ನ ಹಣೆ ಬರಹವೆಂದು ಒಬ್ಬಳೇ ಕೊರಗುತ್ತಾಳೆ ಹೊರತು ಮಕ್ಕಳಿಗೆ‌ ಕೊಡುವ ಪ್ರೀತಿಯನ್ನು ಎಂದು ಕಡಿಮೆ ಮಾಡುವುದಿಲ್ಲ. ಈ ಕಾರಣಕ್ಕಾಗಿಯೆ ಅಮ್ಮನನ್ನು ಸಹನೆಯ ಪ್ರತಿರೂಪ ಎಂದು ಕರೆಯುವುದು. 

ಅದರಲ್ಲೂ ಗಂಡು ಮಗನಾದರೆ ನನ್ನ ವಂಶೋದ್ಧಾರಕನೆಂದೆ ತಿಳಿದು ಅವನ ಏಳಿಗೆಗಾಗಿ ಹಗಲಿರುಳು  ಶ್ರಮಿಸುತ್ತಾಳೆ. ಮಗನ ರಕ್ಷಣೆಗಾಗಿ ಕೋಟೆ ಕಟ್ಟಿ ಕೂರುತ್ತಾಳೆ . ಸಾಕಷ್ಟು ಮಕ್ಕಳು ಅಮ್ಮನ ಆಸೆಗೆ ಹೆಗಲುಕೊಟ್ಟು ಆಕೆಯ ಕನಸು ನನಸುಮಾಡುವ ಹಾದಿಯಲ್ಲಿ ಹೆಜ್ಜೆ ಹಾಕಿದರೆ. ಇನ್ನೂ ಕೇಲವು ಮಕ್ಕಳು ಆನರೋಗ್ಯದ ಹಿನಲೆಯಲ್ಲೊ ಆಕಸ್ಮಿಕ ಘಟನೆಯ ಸುಳಿಗೆ ಸಿಲುಕಿ ಅಥವಾ ಇನ್ಯಾವುದೋ ತೊಂದರೆ ಸಿಲುಕಿ  ವಯಸ್ಸಿಗೆ ಬಾರದ ಮುನ್ನವೋ ವಯಸ್ಸಿಗೆ ಬಂದನಂತರವೋ  ಅಮ್ಮನ ಮಡಿಲು ಬಿಟ್ಟು ಸಾವಿನೆಡೆಗೆ ಹೆಜ್ಜೆಹಾಕಿ ಹೊರಟು ಹೋಗಿರುವ ಅದೆಷ್ಟೋ ಘಟನೆಗಳು ನಮ್ಮ ಮುಂದಿವೆ.  

ಇನ್ನೂ ಎದೆ ಮಟ್ಟಕ್ಕೆ ಬೆಳೆದ ಮಗ ಸಂಸಾರದ ಜವಾಬ್ದಾರಿ ಹೊರುತ್ತಾನೆ  ಎಂದು ಕನಸು ಕಾಣುವ ಹೊತ್ತಿಗೆ ಮಗ  ಹಾದಿ ತಪ್ಪಿರುತ್ತಾನೆ. ಸಂಧರ್ಭಕ್ಕೊ??? ತನಗಾಗಬಹುದಾದ ತೊಂದರೆಯನ್ನು ಮೇಟ್ಟಿ ನಿಲ್ಲಲೋ?? ಹಾದಿ ತಪ್ಪಿದರೆ. ಇನ್ನೂ ಕೆಲವರು ಹೆತ್ತವರನ್ನು ಒಡಹುಟ್ಟಿದವರನ್ನು ಮರೆತು  ಮೊಜು ಮಸ್ತಿಗಾಗಿ ಕ್ಷಣಮಾತ್ರದ ಸುಖಕ್ಕಾಗಿ ತಮ್ಮ ‌ಬದುಕನ್ನೆ ಛಿದ್ರ ಮಾಡಿಕೊಂಡು ಹಾದಿತಪ್ಪಿ ಸುಡುಗಾಡು ಸೇರುತ್ತಾರೆ.

ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್  ಹಂದಿ ಅಣ್ಣಿ ಕೂಡ ಹಾದಿ ತಪ್ಪಲು ಕೂಡಾ ಒಂದು ವಿಷಗಳಿಗೆ ಕಾರಣವಾಯಿತು… ಅಂದು ತಾನಾಯಿತು ತನ್ನ ಬದುಕಾಯಿತು ಎಂದು ಮೀಸೆ ಮೂಡುವ ಮುನ್ನವೇ ದುಡಿಯುವ ಗೀಳಿಗೆ ಬಿದ್ದ ಹಂದಿ ಅಣ್ಣಿ ಮನೆಯ ಹಿರಿಮಗ ಕೂಡ ಹೌದು. ತಂದೆಯ ಜವಾಬ್ದಾರಿಯನ್ನು ಹೊತ್ತು ಸಂಸಾರ ನಿಭಾಯಿಸಲು ಅಮ್ಮನಿಗೆ ಹೆಗಲು ಕೊಟ್ಟ ಅಣ್ಣಿ ಅಮ್ಮನ ಪ್ರೀತಿಯ ಮಗ. ನೆಮ್ಮದಿಯಿಂದ ದಿನ ಕಳೆಯುತ್ತಿದ್ದ ಅಣ್ಣಿಗೆ ತನ್ನ ಬದುಕು ಹಾದಿ ತಪ್ಪುತ್ತದೆ ಎನ್ನುವ ಸಣ್ಣ ಸುಳಿವು ಕೂಡಾ ಇರಲಿಲ್ಲ
     
2006ನೇ ಆಗಸ್ಟ್ ಏಳನೇ ತಾರೀಖು ಅಣ್ಣಿಯ ಬದುಕಿನ ಕೆಟ್ಟ ದಿನ:

 ಅಂದು ದುಡಿಯುವ ಕೈಯಲ್ಲಿ ಅಣ್ಣಿ ( ಹಂದಿ ಅಣ್ಣಿ ) ಲಾಂಗ್ ಹಿಡಿದು ಕುಳಿತು ಬಿಟ್ಟಿದ್ದ  ಅಶೋಕ ನಗರದಲ್ಲಿರುವ ನಿವೇಶನವೊಂದರ ವಿಷಯದಲ್ಲಿ ಅಣ್ಣಿ ಅಂದಿನ ಭೂಗತ ಲೋಕದ ಡಾನ್ ಗಳಾಗಿ ಮೆರೆಯುತ್ತಿದ್ದ ಲವ ಕುಶರೊಂದಿಗೆ ಸಣ್ಣದೊಂದು ಕಿರಿಕ್ ಮಾಡಿಕೊಂಡಿದ್ದ, ಇದನ್ನು ಸಹಿಸದ ಅವಳಿ ಸಹೋದರರು ಅಣ್ಣಿಯನ್ನು ಒಂದೆರಡು ಬಾರಿ ಥಳಿಸಿದ್ದರು.  ಹೇಳಿ ಕೇಳಿ ಬಿಸಿ ರಕ್ತದ ಹುಡುಗ ಅಣ್ಣಪ್ಪ ತನಗಾದ ಅವಮಾನವನ್ನು ಮರೆಯಲಿಲ್ಲ ಇವರನ್ನು ಸುಮ್ಮನೇ ಬಿಟ್ಟರೆ ಮತ್ತೆ ಮತ್ತೆ ಅವಮಾನಿಸಬಹುದು ಎಂದು ತಿಳಿದ ಅಣ್ಣಿ  ತನ್ನ ಸ್ನೇಹಿತರೆದುರು ಹೇಳಿಕೊಂಡಿದ್ದಾನೆ . ಮುಂದಾಗಬಹುದಾದ ಆನಾಹುತವನ್ನು ಅರಿಯದ ಅಣ್ಣಿ ಮತ್ತು ಆತನ ಬಳಗ ನಟೋರಿಯಸ್ ಅವಳಿ ಸಹೋದರರಾದ ಲವ ಕುಶನಿಗೆ ರಾತ್ರೋ ರಾತ್ರಿ ಮುಹೂರ್ತ ಫಿಕ್ಸ್ ಮಾಡಿ ಸ್ಕೆಚ್ ಹಾಕಿ ಕುಳಿತೆ ಬಿಟ್ಟರೂ. 

ಅಂದು ಬೆಳಿಗ್ಗೆ  ಹನ್ನೆರಡು ಗಂಟೆಯ ಸುಮಾರಿಗೆ ಲವ ಕುಶ ಸಹೋದರು ಪ್ರಕರಣವೊಂದಕ್ಕೆ ಸಂಭಂದಿಸಿದಂತೆ ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗಿ ಸಾಗರ ರಸ್ತೆಯ ಶಿವ ಶಕ್ತಿ ಆಟೋಮೊಬೈಲ್  ಅಂಗಡಿಯ ಬಳಿಗೆ ಬಂದಿದ್ದಾರೆ. ಅವಳಿ ಸಹೋದರರು ಇಲ್ಲಿಗೆ ಬರುವುದನ್ನು ಮಾಹಿತಿದಾರನಿಂದ ಖಾತ್ರಿ ಮಾಡಿಕೊಂಡ  ಅಣ್ಣಿಯ ಗ್ಯಾಂಗಿನ ಏಳೆಂಟು ಹುಡುಗರು ಅವಳಿ ಸಹೋದರ ಮೇಲೆ ದೀಡಿರ್ ದಾಳಿಮಾಡಿ ಮಾರಕಾಸ್ತ್ರದಿಂದ ಮನಬಂದಂತೆ ಕೊಚ್ಚಿ  ಹತ್ಯೆಮಾಡಿ ಕಣ್ಮರೆ ಆಗುವುದರ ಜೊತೆಗೆ ಅಂದು ಭೂಗತ ಜಗತ್ತಿಗೆ ಅವಳಿ ಸಹೋದರ ಹತ್ಯೆಯ ಮೆಸೇಜ್ ರವಾನಿಸಿ ನಡುಕ ಹುಟ್ಟಿಸಿದ್ದರು. 

ರಾತ್ರಿ ಬೆಳಗಾಗುವುದರಲ್ಲಿ ಸರಿಯಾಗಿ ಮೀಸೆ ಬಾರದ ಹುಡುಗರ ತಂಡ ಲವ ಕುಶ ಎನ್ನುವ ನಟೋರಿಯಸ್ ಅವಳಿ ಸಹೋದರ ಹತ್ಯೆಮಾಡಿ ಪಾತಕ ಲೋಕದಲ್ಲಿ ಮಂಚೂಣಿಗೆ ಬಂದಿದ್ದರು. 

 ದುಡಿಯುವ ಕೈಗೆ ನೆತ್ತರು ಅಂಟಿಸಿಕೊಂಡ ಅಣ್ಣಿ ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಲವ ಕುಶರ ಬರ್ಬರ ಹತ್ಯೆಮಾಡಿ ನಟೋರಿಯಸ್ ಗಳ ಸಾಲಿಗೆ ಸೇರ್ಪಡೆಯಾಗುವುದರೊಂದಿಗೆ ನಟೋರಿಯಸ್ ರೌಡಿಯಾಗಿ ಪಾತಕ ಲೋಕದಲ್ಲಿ ಗುರುತಿಸಿಕೊಂಡು  ಅಂದು ಅಣ್ಣಪ್ಪನಾಗಿದ್ದ ಅಣ್ಣಿ “ಹಂದಿ ಅಣ್ಣಿ”ಯಾಗಿ ಕ್ರೈಮ್ ಲೋಕದಲ್ಲಿ ಚಾಲ್ತಿಗೆ ಬಂದವನು ತಿರುಗಿ ನೋಡಲೆ ಇಲ್ಲ .
    
ಅವಳಿ ಸಹೋದರ ಹತ್ಯೆಯ ನಂತರ ಹಲವು ಪ್ರಕರಣದಲ್ಲಿ ಬಾಗಿಯಾಗಿ ಒಂದೆರಡು ಹತ್ಯಾ ಪ್ರಕರಣಗಳು ಸೇರಿದಂತೆ ಸುಮಾರು ಎಂಟು ಪ್ರಕರಣವು ಅಣ್ಣಿಯ ಮೇಲೆ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.


ಹಂದಿ ಅಣ್ಣಿ ಒಬ್ಬ ನಟೋರಿಯಸ್ ರೌಡಿ ಅನ್ನುವುದನ್ನು ಬಿಟ್ಟರೆ ಲಾಂಗ್ ಹಿಡಿದ ಕ್ಷಣವೇ ನೆಮ್ಮದಿ ಕಳೆದುಕೊಂಡಿದ್ದ.  ಅಕ್ರಮ ದಂಧೆಯಲ್ಲಿ ಹಣಹರಿದು ಬಂದರು ಅದು ಸುಖ ಕೊಡಲಿಲ್ಲ ಎದೆ ಮಟ್ಟಕ್ಕೆ ಬೆಳೆದಿದ್ದ ಸಹೋದರ ಗೀರಿಶನನ್ನು ಕಳೆದುಕೊಂಡ.  ಕ್ಷುಲ್ಲಕ ಕಾರಣಕ್ಕೆ ಹಂತಕರು ನಡುರಸ್ತೆಯಲ್ಲೆ ಅಣ್ಣಿಯ ಸಹೋದರ ಗಿರೀಶನ ನೆತ್ತರು ಹರಿಸಿ ಕೊಂದರು. ತಮ್ಮನ ಸಾವನ್ನು ಕಣ್ಣಾರೆ ಕಂಡ ಅಣ್ಣಿ ಮತ್ತಷ್ಟು ಕುಗ್ಗಿ ಹೊಗಿದ್ದ. ಇದೆ ಸಮಯದಲ್ಲಿ ಬಂಕ್ ಬಾಲು ಹತ್ಯೆಗೆ ಸಂಬಂಧಿಸಿದಂತೆ ಬಾಲು ಶಿಷ್ಯವೃಂದ  ಬಾಲು ಹತ್ಯೆಗೆ ಕಾರಣರಾದವರ ಹತ್ಯೆ ಮಾಡಲು ಸಂಚು ರೂಪಿಸಿದ್ದರು.ಬಂಕ್ ಬಾಲು ಹತ್ಯೆಯಲ್ಲಿ ಹಂದಿ ಅಣ್ಣಿಯ ಕೈವಾಡ ಇದೆ ಎಂದು ಅವನ ಮೇಲು ಜಿದ್ದಿಗೆ ಬಿದ್ದ ಬಾಲುವಿನ ಸಹಚರರು  ಅಣ್ಣಿಯ ಚಲನವಲನದ ಮೇಲೆ ಕಳೆದ ಒಂದೆರಡು ತಿಂಗಳಿಂದ ನಿಗಾ ಇಟ್ಟಿದ್ದರು. ಸರಿಯಾದ ಸಮಯಕ್ಕೆ ಕಾದು ಕುಳಿತಿದ್ದ ಹಂತಕರು   ಕಳೆದ ಎರಡು ದಿನಗಳ ಹಿಂದೆ  ಅಣ್ಣಿ ಬೆನ್ನಿಗೆ ಬಿದ್ದು ಬಿಟ್ಟು ಬಿಡದೆ ವಿನೋಬಾ ನಗರದ ಪೋಲಿಸ್ ಠಾಣೆಯ ಹತ್ತಿರದ ನಡುರಸ್ತೆಯಲ್ಲೆ ಸುಮಾರು ಏಳು ಜನ ಹಂತಕರು ಮಾರಕಾಸ್ತ್ರದಿಂದ ದಾಳಿಮಾಡಿ ಹೊಡೆದುರುಳಿಸಿದ್ದಾರೆ. ಹಂತಕರ ದಿಢೀರ್ ದಾಳಿಗೆ ಕತ್ತರಿಸಿ ಬಿದ್ದ ಅಣ್ಣಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ .

ಪಾತಕ ಲೋಕದಲ್ಲಿ ಸದ್ದುಮಾಡಿದ ಅಣ್ಣಿಯ ಬದುಕು ಅಂತ್ಯವಾಗಿದೆ. ಎಷ್ಟೇ ತೊಳೆದರು ಕೈಗೆ ಅಂಟಿದ ನೆತ್ತದ ಕಲೆ ಹೋಗಲಿಲ್ಲ ಭೂಗತ ಜಗತ್ತಿನ ಬಾಹು ಬಂಧನದಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಅಗಾಧವಾಗಿ ಪ್ರೀತಿಸುತ್ತಿದ್ದ ಅಮ್ಮನ ಮಡಿಲಲ್ಲಿ ಇಂದು ಹೆಣವಾಗಿ ಮಲಗಿದ್ದಾನೆ.  

ಬಾಳಿ ಬದುಕಬೇಕಾಗಿದ್ದ ಹುಡುಗನೊಬ್ಬ ರಕ್ತದ ಕಲೆ ಅಂಟಿಸಿಕೊಂಡು ಪಾತಕ ಲೋಕದ ಪುಟ ಸೇರಿ ಶವವಾಗಿ ಮಲಗಿದ್ದಾನೆ. ಎದೆ ಮಟ್ಟಕ್ಕೆ ಬೆಳೆದ ಇಬ್ಬರು ಮಕ್ಕಳನ್ನು ಕಳೆದುಕೊಂಡ ತಾಯಿ ಮಾತ್ರ ಅನಾಥಳಾಗಿದ್ದಾಳೆ. ಹಂತಕರಿಗೆ ಹಿಡಿಶಾಪ ಹಾಕುತ್ತಿದ್ದಾಳೆ .

 ಪಾತಕ ಲೋಕದೆಡೆ ಹೆಜ್ಜೆ ಹಾಕಿ ಸಾವಿನ ಮನೆ ಸೇರಿರುವ ಅದೇಷ್ಟೊ ಭೂಗತ ಪಾತಕಿಗಳ ಮನೆಯ ಸ್ಥಿತಿಯು ಇದೆ  ಹೆತ್ತ ತಾಯಿಯ ಸ್ಥಿತಿಯು ಇದೆ ಆಗಿದೆ ಎನ್ನುವುದು ಮಾತ್ರ ಕಟು ಸತ್ಯ……
  
ಒಟ್ಟಿನಲ್ಲಿ ಭವಿಷ್ಯದ ಯುವ ಪೀಳಿಗೆಯು ಹಾದಿ ತಪ್ಪುತ್ತಿರುವುದು ಮಾತ್ರ ದುರಂತವೆ ಆಗಿದೆ….

ವರದಿ – ಸುಧೀರ್ ವಿಧಾತ, ಶಿವಮೊಗ್ಗ
ವೀಡಿಯೋ ಇಲ್ಲಿ ವೀಕ್ಷಿಸಿ👇




Leave a Reply

Your email address will not be published. Required fields are marked *