Headlines

ಮಾರಕಾಸ್ತ್ರಗಳೊಂದಿಗೆ ವೀಡಿಯೋ ಚಿತ್ರಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಯುವಕನ ಬಂಧನ |Cybercrime

ಮಾರಕಾಸ್ತ್ರಗಳನ್ನು ಹಿಡಿದುಕೊಂಡು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಯುವಕನನ್ನು ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಶಿವಮೊಗ್ಗ ತಾಲೂಕಿನ ಅಗಸವಳ್ಳಿಯ ಗೌಳಿ ಕ್ಯಾಂಪ್‌ನ ಇಸ್ಮಾಯಿಲ್ (20) ಬಂಧಿತ ಆರೋಪಿಯಾಗಿದ್ದು, ಈತ ಸಾಮಾಜಿಕ ಜಾಲತಾಣದಲ್ಲಿ ಲಾಂಗು-ಮಚ್ಚುಗಳೊಂದಿಗೆ ಇರುವ ವಿಡಿಯೋ ಹರಿಬಿಟ್ಟು ಸಾರ್ವಜನಿಕರಲ್ಲಿ ಭಯ ಉಂಟು ಮಾಡಿದ್ದನು.

ಈತನು ಫೇಸ್‌ಬುಕ್‌ನಲ್ಲಿ ಇಸ್ಮಾಯಿಲ್ ಇಸ್ಮಾಯಿಲ್ ಎಂಬ ಖಾತೆ ಹೊಂದಿದ್ದ. ಜೊತೆಗೆ ಐದಾರು ಮಚ್ಚು ಮತ್ತು ತಲ್ವಾರ್‌ಗಳ ನಡುವೆ ಕಾಣಿಸಿಕೊಳ್ಳುವ ತನ್ನದೇ ವಿಡಿಯೋ ಮಾಡಿ ಪೇಸ್ಬುಕ್ ನಲ್ಲಿ ಹರಿಯಬಿಟ್ಟಿದ್ದ. 

ಈ ಬಗ್ಗೆ ಸುಮೋಟೋ ಪ್ರಕರಣವನ್ನು ತುಂಗಾ ನಗರ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದರು.ಇನ್ನೂ ಇಸ್ಮಾಯಿಲ್ ತಮಿಳುನಾಡಿಗೆ ಹೋದಾಗ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.

Leave a Reply

Your email address will not be published. Required fields are marked *