ರಿಪ್ಪನ್‌ಪೇಟೆ : ಕಲಾ ಕೌಸ್ತುಭ ಕನ್ನಡ ಸಂಘದ ವತಿಯಿಂದ ಸಾವಿರಾರು ಹೆರಿಗೆ ಮಾಡಿಸಿರುವ ಸೂಲಗಿತ್ತಿ ಜಯಮ್ಮ ರವರಿಗೆ ಸನ್ಮಾನ|Ripponpet

ರಿಪ್ಪನ್‌ಪೇಟೆ : ಇಲ್ಲಿನ ಕಲಾ ಕೌಸ್ತುಭ ಕನ್ನಡ ಸಂಘ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಾವಿರಾರು ಹೆರಿಗೆ ಮಾಡಿಸುವ ಮೂಲಕ ಮಲೆನಾಡಿನಲ್ಲಿ ಮನೆಮಾತಾಗಿರುವ ಸೂಲಗಿತ್ತಿ ಜಯಮ್ಮ ರವರಿಗೆಸನ್ಮಾನಿಸಿ ಗೌರವಿಸಲಾಯಿತು.

ಶನಿವಾರ ಸಂಜೆ ಪಟ್ಟಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಹಲವಾರು ವರ್ಷಗಳಿಂದ ಸೂಲಗಿತ್ತಿ ಸೇವೆ ಮಾಡಿಕೊಂಡು ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸುತಿದ್ದ ಜಯಮ್ಮ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಜಯಲಕ್ಷ್ಮಿ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಹೊಸನಗರ ರಸ್ತೆಯ ಶ್ರೀರಾಮನಗರದ ನಿವಾಸಿ. ಬಡತನದಲ್ಲಿಯೇ ಅರಳಿದ ಪ್ರತಿಭೆ ಇವರು. ಸೂಲಗಿತ್ತಿಯ ಕಾಯಕ ಮಾಡುವುದರಲ್ಲಿ ನಿಸ್ಸೀಮರು

ಎಷ್ಟೇ ಕಗ್ಗತ್ತಲು ಆವರಿಸಿರಲಿ, ಮಳೆ ಸುರಿಯುತ್ತಿರಲಿ, ಗರ್ಭಿಣಿಯ ನರಳಾಟ ಸುದ್ದಿ ಕೇಳಿದ್ರೆ ಸಾಕು ಅಲ್ಲಿ ಹಾಜರಾಗುತಿದ್ದರು. ಕತ್ತಲಾಗಿದ್ರು ಕೈಯಲ್ಲಿ ಬುಡ್ಡಿ ದೀಪದ ಲಾಟೀನು ಹಿಡಿದು ಪ್ರಸವ ಮಾಡಿಸುತಿದ್ದ ಸೂಲಗಿತ್ತಿ. ನಾಟಿ ವೈದ್ಯ, ಸಾಂತ್ವನದ ಮೂಲಕ ಸುಲಭವಾಗಿ ಹೆರಿಗೆ ಮಾಡಿಸಬಲ್ಲ ರಿಪ್ಪನ್‌ಪೇಟೆ ಸುತ್ತಮುತ್ತಲಿನ ಸಂಚಾರಿ ಆಸ್ಪತ್ರೆಯಂತೆ ಕೆಲಸ ಮಾಡುತಿದ್ದ ಸೂಲಗಿತ್ತಿ ಜಯಮ್ಮ.

ಜಯಮ್ಮ ರವರು ಮೊದಲು ತನ್ನ ಮನೆಯಲ್ಲಿ ಹೆರಿಗೆ ಮಾಡಿಸುತ್ತಾ,ನಂತರ ಪಟ್ಟಣದಲ್ಲಿ ಅದಾದ ಬಳಿಕ ಸುತ್ತಮುತ್ತಲಿನ ಗ್ರಾಮದಲ್ಲಿ ಎಂತಹ ಕಷ್ಟದ ಹೆರಿಗೆಯಾದರೂ ತನ್ನ ಅನುಭವದಿಂದ ಮಾಡಿಸುವ ಕಾಯಕ ಜಯಮ್ಮ ನವರದು. ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಸುಮಾರು 40 ವರ್ಷದಿಂದ ಸುತ್ತಮುತ್ತಲ ಸುಮಾರು 40 ಗ್ರಾಮಗಳಲ್ಲಿ  ಸಾವಿರಾರು ಹೆರಿಗೆಗಳನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಮಾಡಿಸಿದ ಕೀರ್ತಿ ಈಕೆಗಿದೆ.ಇನ್ನೊಂದು ಖುಷಿಯ ವಿಚಾರ ಏನೆಂದರೇ ಸಾವಿರಾರು ಹೆರಿಗೆ ಮಾಡಿಸುವ ಪಯಣದಲ್ಲಿ ಒಂದೇ ಒಂದು ಸಾವು ನೋವು ಅನುಭವಿಸಿಲ್ಲ ಅದೇ ಇವರ ಹೆಗ್ಗಳಿಕೆ…

ಇವರ ಸೇವೆಯನ್ನು ಗುರುತಿಸಿ ಇತ್ತೀಚಿಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ವತಿಯಿಂದ ಜಯಮ್ಮ ರವರನ್ನು ಸನ್ಮಾನಿಸಿ ಗೌರವಿಸಲಾಗಿತ್ತು.

ಈ ಸಂಧರ್ಭದಲ್ಲಿ ಶಾಸಕ ಹರತಾಳು ಹಾಲಪ್ಪ, ಗ್ರಾಪಂ ಅಧ್ಯಕ್ಷೆ ಮಂಜುಳಾ ಕೆ ರಾವ್,ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ನಿರೂಪ್ ಕುಮಾರ್,ಕೆ ಎಸ್ ಪ್ರಶಾಂತ್ , ಡಾ.ರಾಜನಂದಿನಿ
ಹೊಸನಗರ ತಾಲೂಕ್ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ ಬಿ ಲಕ್ಷ್ಮಣಗೌಡ,ಜಿಪಂ ಮಾಜಿ ಸದಸ್ಯರುಗಳಾದ ಬಿ‌ ಪಿ ರಾಮಚಂದ್ರ ,ಎ ಟಿ ನಾಗರತ್ನ ,ಸಮಿತಿಯ ಪ್ರಮುಖರಾದ ನಾಗರತ್ನ ದೇವರಾಜ್, ಆರ್ ಟಿ ಗೋಪಾಲ್ , ಎನ್ ಸತೀಶ್ ,ಎಂ ಬಿ ಮಂಜುನಾಥ್ ,ಸುರೇಶ್ ಸಿಂಗ್‌ , ಯುವ ಉದ್ಯಮಿ ಪವನ್ ಶೆಟ್ಟಿ,ಪದ್ಮಾ ಸುರೇಶ್, ಉಮಾ ಸುರೇಶ್, ಲೀಲಾ ಶಂಕರ್,ಲಕ್ಷ್ಮಿ ಶ್ರೀನಿವಾಸ್ ಹಾಗೂ ಇನ್ನಿತರರು ಇದ್ದರು

Leave a Reply

Your email address will not be published. Required fields are marked *