ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಮೈಸೂರು ತಾಳಗುಪ್ಪ ರೈಲು ಹತ್ತುವಾಗ ಪ್ರಯಾಣಿಕನೋರ್ವ ಸ್ಲಿಪ್ ಆಗಿ ಕೆಳಗೆ ಬಿದ್ದ ಘಟನೆ ನಡೆದಿದ್ದು ಈ ಘಟನೆ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಪ್ರಯಾಣಿಕರು ಕೆಳಗೆ ಬೀಳುವುದನ್ನ ಗಮನಿಸಿದ ರೈಲ್ವೆ ಆರ್ ಪಿ ಎಫ್ ನ ಸಿಬ್ಬಂದಿ ಮಂಜುನಾಥ್ ಮತ್ತು ಅಣ್ಣಪ್ಪ ಅವರನ್ನ ರಕ್ಷಿಸಿದ್ದಾರೆ. ನಂತರ ಸಾರ್ವಜನಿಕರು ಸಹ ಸಿಬ್ವಂದಿಗಳ ಜೊತೆ ಕೈಜೋಡಿಸಿದ್ದಾರೆ. ಈ ವಿಡಿಯೋವನ್ನ ಟ್ವೀಟರ್ ನಲ್ಲಿ ಆರ್ ಪಿ ಎಫ್ ಮೈಸೂರು ವಿಭಾಗದ ರೈಲ್ವೆಯವರು ಪೋಸ್ಟ್ ಮಾಡಿದ್ದಾರೆ.
ನಿನ್ನೆ ಬೆಳಿಗ್ಗೆ ೧೧-೧೫ ಕ್ಕೆ ಶಿವಮೊಗ್ಗ ಬಿಡುವ ೧೬೨೨೧ ಕ್ರಮ ಸಂಖ್ಯೆಯ ರೈಲಿನಲ್ಲಿ ತನ್ನ ಕುಟುಂಬ ಸಮೇತ ಶಿವಮೊಗ್ಗದಿಂದ ಮೈಸೂರಿಗೆ ತೆರಳಬೇಕಿದ್ದ ದಿಲೀಪ್ ಕುಮಾರ್ ಘಾಟ್ಕೆ(೫೯) ಟಿಕೇಟ್ ಖರೀದಿಸಿ ರೈಲ್ವೆ ನಿಲ್ದಾಣದ ಅಂಗಡಿಯಿಂದ ತಿಂಡಿ ತರಲು ಹೋಗಿದ್ದು, ಖರೀದಿಸಿ ವಾಪಾಸ್ ಚಲಿಸುತ್ತಿದ್ದಾಗ ರೈಲನ್ನ ಹತ್ತಲು ಹೋಗಿ ಕಾಲು ಜಾರಿ ಕೆಳಗ ಬಿದ್ದಿದ್ದರು.
ಆದರೆ ಅದೃಷ್ಟವಶಾತ ಕೆಳಗೆ ಬಿದ್ದ ದಿಲೀಪ್ ಕುಮಾರ್ ಸೇಫ್ ಆಗಿದ್ದರು. ಇದನ್ನ ಗಮನಸಿದ ಆರ್ ಪಿ ಎಫ್ ಕಾನ್ ಸ್ಟೇಬಲ್ ಮಂಜುನಾಥ್ ಮತ್ತು ಅಣ್ಣಪ್ಪ ತಕ್ಷಣವೇ ಗಾರ್ಡ ಗೆ ಕರೆ ಮಾಡಿ ರೈಲನ್ನು ನಿಲ್ಲಿಸಿದ್ದಾರೆ.
ನಂತರ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಅದೇ ರೈಲಿನಲ್ಲಿ ಮೈಸೂರಿಗೆ ಕಳುಹಿಸಲಾಗಿದೆ. ದಿಲೀಪ್ ಕುಮಾರ್ ರಾಜೇಂದ್ರ ನಗರದ ಶ್ರೀಧರ್ ನರ್ಸಿಂಗ್ ಹೋಂ ಬಳಿಯ ನಿವಾಸಿ ಎಂದು ತಿಳಿದುಬಂದಿದೆ.
ಚಲಿಸುತ್ತಿರುವ ರೈಲನ್ನು ಹತ್ತದಂತೆ ಆರ್ ಪಿ ಎಫ್ ಪ್ರಯಾಣಿಕರಲ್ಲಿ ಮನವಿ ಮಾಡಿದೆ.
ಸಿಸಿಟಿವಿ ವೀಡಿಯೋ ಇಲ್ಲಿ ವೀಕ್ಷಿಸಿ👇