ಅಂಗನವಾಡಿ ಕಾರ್ಯಕರ್ತೆರಿಗೆ ಮತ್ತು ಸಹಾಯಕಿಯರಿಗೆ ಮನೆ ಮತ್ತು ಬಿಪಿಎಲ್ ಕಾರ್ಡ್ ಕಡ್ಡಾಯ ನೀಡುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗುವುದು : ಹರತಾಳು ಹಾಲಪ್ಪ|Ripponpet

ರಿಪ್ಪನ್‌ಪೇಟೆ : ಜಗತ್ತನ್ನು ವ್ಯಾಪಿಸಿದ್ದ ಕೊರೋನಾ ಮಹಾಮಾರಿ ರೋಗದ ಸಂದರ್ಭದಲ್ಲಿ ಅಂಗನವಾಡಿ ಆಶಾ ಮತ್ತು ಅರೋಗ್ಯ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಶ್ರಮಿಸಿರುವುದು ಪ್ರಸಂಶನೀಯವಾಗಿದೆ ಅದರೆ ಅವರಿಗೆ ಕನಿಷ್ಟ ವೇತನವಿಲ್ಲದೆ ಪರದಾಡುವ ಸ್ಥಿತಿ ಇದ್ದರೂ ಕರ್ತವ್ಯವನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ ಇವರಿಗೆ ಇದೇ 19 ರಿಂದ ಅರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಿ ಸರ್ಕಾರದ ಗಮನಸೆಳೆಯುವುದರೊಂದಿಗೆ ಪರಿಹಾರ ಕಲ್ಪಿಸುವ ಭರವಸೆಯನ್ನು ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ವ್ಯಕ್ತಪಡಿಸಿದರು.


ರಿಪ್ಪನ್‌ಪೇಟೆಯ ಜ್ಯೋತಿಮಾಂಗಲ್ಯ ಮಂದಿರದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರö್ಯ ಸಂಘಟನೆಯವರು ಅಯೋಜಿಸಲಾದ “ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ದಿನಾಚರಣೆ ಮತ್ತು ಸಮಾವೇಶವನ್ನು ಉದ್ಘಾಟಿಸಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ ಪ್ರಜಾಪ್ರಭುತ್ವ ಸರ್ಕಾರದ ಪ್ರತಿನಿಧಿಯಾಗಿ ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಬೇಡಿಕೆಯನ್ನು ಸಮರ್ಥನೆ ಮಾಡಿಕೊಳ್ಳುವುದು ಕಷ್ಟ ಅವರಿಗೆ ಸರ್ಕಾರ ನೀಡುವುದು ಗೌರವಧನ ಅರೆಹೊಟ್ಟೆಗೂ ಸಾಲದು ಈ ಭಾರಿಯ ಅಧಿವೇಶನದಲ್ಲಿ ತಮ್ಮ ಸಮಸ್ಯೆಗೆ ಪರಿಣಾಮಕಾರಿಯಾಗಿ ದ್ವನಿಎತ್ತಿ ಪರಿಹರಿಸುವ ಭರವಸೆ ನೀಡಿ ತಮ್ಮ ಶೆವೆಗೆ ತಕ್ಕ ಪ್ರತಿಫಲ ಸಿಗುವಂತೆ ಮಾಡುವುದಾಗಿ ಹೇಳಿ ಇವರಿಗೆ ಮನೆ ಮತ್ತು ಬಿ.ಪಿ.ಎಲ್.ಕಾರ್ಡ್ಯನ್ನು ಕಡ್ಡಾಯವಾಗಿ ನೀಡುವಂತೆ ಸಹ ಸರ್ಕಾರಕ್ಕೆ ಒತ್ತಡ ತರುವುದಾಗಿ ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಮಾತ್ರ ನೀಡಲಾಗುತ್ತಿದೆಯೋ ಹೊರತು ಧನ ನೀಡುತ್ತಿಲ್ಲ.ಎಲ್ಲಾರ ಸೇವೆ ಮಾಡಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಅರೆಹೊಟ್ಟೆ ಮಾಡುವಂತಹ ಕೆಲಸ ಸರ್ಕಾರದಿಂದ ನಡೆಯುತ್ತಿದೆ.ನಿಮ್ಮ ಪರವಾಗಿ ಸದನದಲ್ಲಿ ಧ್ವನಿ ಎತ್ತಿ ನ್ಯಾಯ ದೊರಕಿಸುವ ಭರವಸೆ ನೀಡಿದರು.ನಿಮ್ಮಂತಹ ಸೇವಕರಿಗೆ ನ್ಯಾಯ ಸಿಗಲೇ ಬೇಕು ,ನಮ್ಮ ಮಕ್ಕಳ ಸೇವೆ ನೀವು ಮಾಡಿದ್ದೀರಿ ನಿಮ್ಮ ಸೇವೆ ನಾನು ಮಾಡುತ್ತೇನೆ ಎಂದರು.ಮಕ್ಕಳಿಗೆ ಉಣಿಸುವುದು ಹರನಿಗೆ ನೈವೈದ್ಯ ಇಟ್ಟ ಹಾಗೆ ಎಂದು ಕುವೆಂಪು ವಾಣಿಯಂತೆ ನೀವು ಸೇವೆ ಮಾಡಿ‌ ಮಕ್ಕಳನ್ನು ಸರಿದಾರಿಯಲ್ಲಿ ನಡೆಸಿದ್ದೀರಿ ನಿಮ್ಮ ಸೇವೆಯನ್ನು ನಾನು ಮಾಡುತ್ತೇನೆ ಎಂದರು.

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸ್ವತಂತ್ರö ಸಂಘಟನೆಯ ರಾಜ್ಯಾಧ್ಯಕ್ಷೆ ಬಿ.ಪ್ರೇಮ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದಲ್ಲಿ 1.32 ಲಕ್ಷ ಕಾರ್ಯಕತೆಯರು ಮತ್ತು ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇವರಿಗೆ ಸರ್ಕಾರ ತಿಂಗಳಿಗೆ 21 ಸಾವಿರ ರೂ ಸಮಾನ ವೇತನ ನೀಡುವಂತೆ ಹಾಗೂ ಸುಮಾರು 12 ಮುಖ್ಯ ಬೇಡಿಕೆಯನ್ನು ಇಟ್ಟುಕೊಂಡು ಹೋರಾಟ ನಡೆಸುವ ಮೂಲಕ ಸರ್ಕಾರದ ಗಮನಸೆಳೆಯುತ್ತಿದ್ದೇವೆ ನಮ್ಮ ಈ ಹೋರಾಟಕ್ಕೆ ಗೃಹ ಸಚಿವರು ಮತ್ತು  ಶಾಸಕ ಬೆಂಬಲಿಸಿದ್ದಾರೆ ಈ ಭಾರಿಯ ಅಧಿವೇಶನದಲ್ಲಿ ನಮ್ಮ ಬೇಡಿಕೆ ಈಡೇರಿಸುತ್ತಾರೆಂಬ ನಂಬಿಕೆ ನಮ್ಮದಾಗಿದೆ ಎಂದು ಶಾಸಕ ಹರತಾಳು ಹಾಲಪ್ಪನವರಿಗೆ ಮನವಿ ಸಲ್ಲಿಸಿದರು.ಹಾಗೂ ಪಾಂಡಿಚರಿ ತೆಲಂಗಾಣ ಗೋವಾ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಸಹಾಯಕಿಯರನ್ನು ಖಾಯಂಗೊಳಿಸಿದಂತೆ ರಾಜ್ಯದಲ್ಲಿಯೂ ನಮ್ಮಗಳನ್ನು ಖಾಯಂ ಗೊಳಿಸಿ ಎಂದು ಅಗ್ರಹಿಸಿದರು.


ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆಯ ಸಾಗರ ಅಧ್ಯಕ್ಷೆ ತ್ರಿವೇಣಿ ಶ್ರೀಕಾಂತ್,ಹೊಸನಗರ ತಾಲ್ಲೂಕ್ ಅಧ್ಯಕ್ಷೆ ಶೀಲಾಗಂಗಾನಾಯ್ಕ್,ಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಂತೋಷ,ಶಶಿರೇಖಾ, ಜಿ.ಅಂ.ಕಾ.ಸ.ಸ್ವ.ಸಂಘಟನೆಯ ಜಿಲ್ಲಾಧ್ಯಕ್ಷೆ ಸಂಪತ್‌ಕುಮಾರಿ,ಗ್ರಾ.ಪಂ.ಅಧ್ಯಕ್ಷೆ ಮಂಜುಳ ಕೇತಾರ್ಜಿರಾವ್,ಉಪಾಧ್ಯಕ್ಷೆ ಮಹಾಲಕ್ಷಿö್ಮ ಮತ್ತು ಗ್ರಾಮ ಪಂಚಾಯ್ತಿ ಸದಸ್ಯರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಸಹಾಯಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.ಡಿ.ವೀಣಾ ಪ್ರಾರ್ಥಿಸಿದರು.

ಶೀಲಾಗಂಗಾನಾಯ್ಕ್ ಸ್ವಾಗತಿಸಿದರು.ವರಲಕ್ಷಿö್ಮ ನಿರೂಪಿಸಿದರು.

Leave a Reply

Your email address will not be published. Required fields are marked *