ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಅರಸಾಳು ವಲಯ ವ್ಯಾಪ್ತಿಯ ಮಸರೂರು ಮನ್ನಾ ಜಂಗಲಿಯಲ್ಲಿ ಕಳೆದ ಒಂದು ವಾರದಿಂದ ಚಿರತೆ ಕಾಣಿಸಿಕೊಂಡಿದ್ದು ಇಂದು ಅಡಿಕೆ ತೋಟದಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ರೈತನು ಚಿರತೆ ಕಂಡು ಗಾಬರಿಯಿಂದ ಮನೆಗೆ ಓಡಿ ಬಂದ ಘಟನೆ ನಡೆದಿದೆ.
ಅರಣ್ಯ ಇಲಾಖೆಯವರು ಅಲುವಳ್ಳಿ ಗ್ರಾಮದ ಗಾಳಿಬೈಲು ಬಳಿಯಲ್ಲಿ ಬೋನ್ ಇಡುವುದರೊಂದಿಗೆ ಚಿರತೆ ಹಿಡಿಯಲು ಮುಂಜಾಗ್ರತಾ ಕ್ರಮ ವಹಿಸಿದ್ದು ನಂತರ ಮಸರೂರು ತೋಟವೊಂದರಲ್ಲಿ ಪ್ರತ್ಯಕ್ಷವಾಗಿದೆ ಎಂಬ ಮಾಹಿತಿಯನ್ನಾದರಿಸಿ ಇಲಾಖೆಯವರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಇಂದು ಮುಂಜಾನೆ ಅಲುವಳ್ಳಿ ಬಳಿಯ ಅಡಿಕೆ ತೋಟದಲ್ಲಿ ರೈತನೋರ್ವ ಕಣ್ಣಾರೇ ಕಂಡು ಗಾಬರಿಯಿಂದ ಮನಗೆ ಓಡಿಬಂದ ಘಟನೆಯಿಂದಾಗಿ ಸುತ್ತಮುತ್ತಲಿನ ರೈತರನ್ನು ಕಂಗಾಲು ಮಾಡಿದ್ದು ತಮ್ಮ ಜಮೀನಿಗೆ ಹೋಗಿ ಬರಲು ಭಯಪಡುವ ಪರಿಸ್ಥಿತಿ ಎದುರಾಗಿದೆ.
ಇತ್ತೀಚೆಗೆ ಮುಗೂಡ್ತಿ ವಲಯ ವ್ಯಾಪ್ತಿಯಲ್ಲಿನ ಮಳವಳ್ಳಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ತುಂಬು ಗಬ್ಬದ ಹಸುವೊಂದು ಬಲಿಯಾಗಿ ಹಸುವಿನ ಹೊಟ್ಟೆಯಲ್ಲಿನ ಕರುವನ್ನು ಸುಮಾರು ಕಿ.ಮೀ ದೂರು ಎಳೆದುಕೊಂಡು ಹೋಗಿ ಹಾಕಿರುವ ವಿಷಯ ಮಾಸುವ ಮುನ್ನವೇ ಅರಸಾಳು ವಲಯ ವ್ಯಾಪ್ತಿಯಲ್ಲಿನ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಲುವಳ್ಳಿ ಗ್ರಾಮದ ಗಾಳಿಬೈಲು ಮಜರೆ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಇಂದು ಪುನ: ಅಲುವಳ್ಳಿಯ ರೈತರ ಅಡಿಕೆ ತೋಟದಲ್ಲಿ ಪ್ರತ್ಯಕ್ಷವಾಗಿದೆ ಇದರಿಂದಾಗಿ ಕಣ್ಣಾರೆ ಕಂಡ ರೈತ ಪುಟ್ಟರಾಜು ತಾನು ನೋಡಿ ಗಾಬರಿಗೊಂಡು ಅತ್ತ ಇತ್ತ ನೋಡದೇ ತೋಟದಿಂದ ಓಡಿ ಮನೆಗೆ ಮರಳಿದೆ ಎಂದು ಮಾಧ್ಯಮದವರ ಬಳಿ ತನ್ನ ಮನದಾಳದ ನೋವಯನ್ನು ತೋಡಿಕೊಂಡರು.
ಅಲ್ಲಗೆಳದ ಇಲಾಖೆ :
-ಅಲುವಳ್ಳಿ ಬಳಿಯಲ್ಲಿನ ಅಡಿಕೆ ತೋಟದಲ್ಲಿ ಕಾಣಿಸಿಕೊಂಡ ಚಿರತೆಯ ಹೆಜ್ಜೆ ಗುರುತಿನ ಬಗ್ಗೆ ರೈತರು ಪೋಟೋ ತಗೆದು ಇಲಾಖೆಯವರಿಗೆ ಕಳುಹಿಸಿದರೆ ಇದು ಚಿರತೆ ಹೆಜ್ಜೆಯಲ್ಲಿ ನಾಯಿಯ ಹೆಜ್ಕೆ ಗುರುತು ಎಂದು ಅಲ್ಲಗೆಳೆದಿದ್ದು ಈ ಬಗ್ಗೆ ಗ್ರಾಮಸ್ಥರಲ್ಲಿ ಅತಂಕ ಮನೆಮಾಡಿದಂತಾಗಿದ್ದು ಮಾದಾಪುರ-ಕಮದೂರು,ಅಲವಳ್ಳಿ-ತೊಳೆಮದ್ದಲು ಕೊರಗಿ-ಮಸರೂರು ಮಾಣಿಕೆರೆ-ಹೊನ್ನಕೊಪ್ಪ-ಖೈರದವರ ಮನೆ ಇನ್ನಿತರ ಗ್ರಾಮಗಳಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜ್‌ಗಳಿಗೆ ಸೈಕಲ್ ಬೈಕ್ ಹಾಗೂ ಕಾಲ್ನಡಿಗೆಯಲ್ಲಿ ಬಂದು ಹೋಗುತ್ತಿದ್ದು ಈ ಚಿರತೆ ಕಾಟದಿಂದಾಗಿ ಮಕ್ಕಳು ಪೋಷಕ ವರ್ಗ ಚಿಂತಿಸುವಂತಾಗಿದೆ.