Headlines

ಗರ್ತಿಕೆರೆ ಬೈಕ್ ಹಾಗೂ ಕಾರಿನ ನಡುವೆ ಅಪಘಾತ : ಅಪಘಾತದ ಸಿಸಿಟಿವಿ ದೃಶ್ಯಾವಳಿ ಇಲ್ಲಿ ವೀಕ್ಷಿಸಿ👇|cctv

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದ ಕಾರು ಹಾಗು ಬೈಕ್ ನಡುವೆ ಅಪಘಾತದ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ.



ಗರ್ತಿಕೆರೆ ಪೆಟ್ರೋಲ್ ಬಂಕ್ ಮುಂಭಾಗ ಬೈಕ್ ಚಾಲಕನ ಅಜಾಗರೂಕತೆಯಿಂದ ಹಿಂಬದಿ ಗಮನಿಸದೆ ಬಲಕ್ಕೆ ತಿರುಗಿಸಿದ್ದಾನೆ ಆ ಸಂಧರ್ಭದಲ್ಲಿ ಅತೀ ವೇಗವಾಗಿ ಬಂದ ಕಾರು ಬೈಕ್ ನ್ನು ತಪ್ಪಿಸಲು ಬಲಕ್ಕೆ ತಿರುಗಿಸಿದ್ದರೂ ಬೈಕ್ ಗೆ ಕಾರು ತಗುಲಿದ ಪರಿಣಾಮ ಬೈಕ್ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಂಭೀರ ಸ್ವರೂಪದ ಗಾಯವಾಗಿದೆ.


ರಿಪ್ಪನ್‌ಪೇಟೆ ಮೂಲದ ಮಾರುತಿ ಬ್ರೀಜಾ(KA 15 N 8990) ಕಾರು ತೀರ್ಥಹಳ್ಳಿ ಕಡೆಗೆ ಸಂಚರಿಸುತ್ತಿದ್ದು ಈ ವೇಳೆ ರಸ್ತೆಗೆ ಅಡ್ಡ ಬಂದ ಬೈಕ್ ತಪ್ಪಿಸಲು ಹೋಗಿ ಕಾರು ರಸ್ತೆ ಬದಿಯ ಚರಂಡಿಗೆ ಉರುಳಿದ್ದು ಈ ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.




ಕುಂಬಾರುಕೊಪ್ಪ ನಿವಾಸಿ ಶಿವಪ್ಪ (58) ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು ತೀರ್ಥಹಳ್ಳಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಗೆ ಕರೆದೊಯ್ಯಲಾಗಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



Leave a Reply

Your email address will not be published. Required fields are marked *