ಫೋಕ್ಸೋ ಪ್ರಕರಣದಲ್ಲಿ ಮಾಜಿ ಸಿ ಎಂ ‘ಯಡಿಯೂರಪ್ಪ’ಗೆ ಬಿಗ್ ರಿಲೀಫ್ – ಬಂಧಿಸದಂತೆ ಹೈಕೋರ್ಟ್ ಆದೇಶ | ಕೋರ್ಟ್ ನಲ್ಲಿ ಏನೆಲ್ಲಾ ನಡೆಯಿತು..!??
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಿನ್ನಯಷ್ಟೇ ಕೋರ್ಟ್ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿತ್ತು. ಈ ಬೆನ್ನಲ್ಲೇ ಪ್ರಕರಣ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು ಮಧ್ಯಂತರ ಆದೇಶದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಆದೇಶಿಸಿದೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಪೋಕ್ಸೋ ಪ್ರಕರಣದಲ್ಲಿ ಬಂಧನದ ಭೀತಿ ಎದುರಾಗಿತ್ತು. ಕಾರಣ ನಿನ್ನಯಷ್ಟೇ ಕೋರ್ಟ್ ಜಾಮೀನು ರಹಿತ ಬಂಧನದ ವಾರಂಟ್ ಜಾರಿಗೊಳಿಸಿತ್ತು. ಈ ಹಿನ್ನಲೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಪ್ರಕರಣ ರದ್ದುಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠವು ನಡೆಸಿತು. ನ್ಯಾಯಪೀಠದ ಮುಂದೆ ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ಅವರು, ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಸೆಕ್ಷನ್ 8ರಡಿಯಲ್ಲಿ ಫೆಬ್ರವರಿ.2ರಂದು ನಡೆದಂತ ಘಟನೆಯ ಬಗ್ಗೆ ಮಾರ್ಚ್.14ರಂದು ಎಫ್ಐಆರ್ ದಾಖಲಾಗಿದೆ ಎಂದರು.
ಹೈಕೋರ್ಟ್ ನ್ಯಾಯಪೀಠವು ಪ್ರಕರಣದ ಮಹಿಳೆಯ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದಾಗ, ಎಜೆ ಶಶಿಕಿರಣ್ ಶೆಟ್ಟಿ ಅವರು ಮಹಿಳೆ ಮೃತಪಟ್ಟಿದ್ದಾರೆ. ಅವರಿಗೆ ಪುತ್ರಿ, ಎಂಜಿನಿಯರಿಂಗ್ ಓದಿದ ಮಗ ಇದ್ದಾನೆ. ಈವರೆಗೆ 53 ದೂರುಗಳನ್ನು ನೀಡಲಾಗಿದೆ. ಮಹಿಳೆಯ ವಿರುದ್ಧ 3 ಕ್ರಿಮಿನಲ್ ಕೇಸ್ ಗಳಿದ್ದಾವೆ. ವಂಚನ, ಕರ್ತವ್ಯಕ್ಕೆ ಅಡ್ಡಿಪಡಿಸಿದಂತ ದೂರುಗಳು ದಾಖಲಾಗಿದ್ದಾವೆ ಎಂದರು.
ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು, ಎಲ್ಲಾ ವಕೀಲರು ತಮ್ಮ ಎಮೋಷನ್ ಬಿಟ್ಟು ವಾದಿಸುವಂತೆ ಮನವಿ ಮಾಡಿದರು. ಜೂನ್.12ರಂದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಲಾಗಿತ್ತು. ಆದ್ರೇ ಅವರು ಹಾಜರಾಗಿರಲಿಲ್ಲ. ಹೀಗಾಗಿ ಬಂಧನದ ವಾರೆಂಟ್ ಪಡೆಯಲಾಗಿದೆ ಎಂಬುದಾಗಿ ನ್ಯಾಯಪೀಠಕ್ಕೆ ಎಜೆ ಶಶಿಕಿರಣ್ ಶೆಟ್ಟಿ ತಿಳಿಸಿದರು.
ಈ ವೇಳೆ ಗರಂ ಆದಂತ ನ್ಯಾಯಮೂರ್ತಿಗಳು ಯಡಿಯೂರಪ್ಪ ವಿಚಾರಣೆಗೆ ಬರಲ್ಲವೆಂದು ನೀವೇ ಏಕೆ ಭಾವಿಸಿದ್ರಿ? ಅವರು ಏನು ಟಾಮ್ ಡಕ್ ಅಂಡ್ ಹ್ಯಾರಿಯಲ್ಲ. ನೀವೇ ಬಂಧಿಸೋ ಅವಕಾಶವಿದ್ದಾಗ ಬಂಧನದ ವಾರೆಂಟ್ ಏಕೆ.? ಅಷ್ಟಕ್ಕೂ ಅವರನ್ನು ಏಕೆ ಬಂಧಿಸಬೇಕು ಎಂಬುದಾಗಿ ಎಜೆಗೆ ಪ್ರಶ್ನಿಸಿದರು.
ಆಗ ನ್ಯಾಯಪೀಠಕ್ಕೆ ಎಜೆ ಶಶಿಕಿರಣ್ ಶೆಟ್ಟಿ ಅವರು ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವಂತ ಯಡಿಯೂರಪ್ಪ ಅವರನ್ನು ಹೊರ ರಾಜ್ಯದಿಂದ ಬಂಧಿಸಬೇಕಿದೆ. ಅದಕ್ಕಾಗಿ ಬಂಧನದ ವಾರಂಟ್ ಪಡೆಯಲಾಗಿದೆ ಎಂಬುದಾಗಿ ಹೇಳಿದರು.
ಅಂತಿಮವಾಗಿ ವಾದ-ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ ನ್ಯಾಯಪೀಠವು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಲ್ಲಿಸಿದ್ದಂತ ಪೋಕ್ಸೋ ಪ್ರಕರಣ ರದ್ದು ಸಂಬಂಧ ಮಧ್ಯಂತರ ಆದೇಶ ಹೊರಡಿಸಿದ್ದು, ಅದರಲ್ಲಿ ಪ್ರಕರಣ ರದ್ದು ಕೋರಿದ್ದ ಅರ್ಜಿಯಲ್ಲಿ ಸರ್ಕಾರಕ್ಕೆ ನೋಟಿಸ್ ನೀಡಿದೆ. ಸಿಆರ್ ಪಿಸಿ 41ಎ ಅಡಿ ಮಾರ್ಚ್.28ರಂದು ಪೊಲೀಸರು ನೋಟಿಸ್ ನೀಡಿದ್ದರು. ಬಿಎಸ್ ಯಡಿಯೂರಪ್ಪ ಬಂಧಿಸದಂತೆ ಹೈಕೋರ್ಟ್ ಆದೇಶಿಸಿದೆ. ಈ ಮೂಲಕ ಬಿಎಸ್ ಯಡಿಯೂರಪ್ಪಗೆ ಬಿಗ್ ರಿಲೀಫ್ ಅನ್ನು ಹೈಕೋರ್ಟ್ ನೀಡಿದೆ.