POSTMAN NEWS

ನೈಜ ಸುದ್ದಿ ನೇರ ಬಿತ್ತರ..

Anandapura | ಬ್ಯಾಂಕ್ ಮ್ಯಾನೇಜರ್ ನ ಮನೆಯ ಬೀಗ ಮುರಿದು ಲಕ್ಷಾಂತರ ರೂ ಕಳ್ಳತನ

Anandapura | ಬ್ಯಾಂಕ್ ಮ್ಯಾನೇಜರ್ ನ ಮನೆಯ ಬೀಗ ಮುರಿದು ಲಕ್ಷಾಂತರ ರೂ ಕಳ್ಳತನ

ಮನೆಯ ಬೀಗ ಮುರಿದು ಲಕ್ಷಾಂತರ ರೂ ಮೌಲ್ಯದ ನಗದು ,ಬಂಗಾರ ಕಳ್ಳತನವಾದ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದ ಅಂದಾಸುರ ಗ್ರಾಮದಲ್ಲಿ ನಡೆದಿದೆ. 

ಆನಂದಪುರದ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಅಬ್ದುಲ್ ಅಹಮದ್ ರವರು ವರ್ಗಾವಣೆಯಾದ ಹಿನ್ನೆಲೆ ಮಣಿಪಾಲ್ ಗೆ ಶನಿವಾರ ಸಂಜೆ ತೆರಳಿದ್ದಾರೆ. ಬುಧವಾರ ಸಂಜೆ ಮನೆಗಳ್ಳತನವಾಗಿರುವ ಬಗ್ಗೆ ಸ್ಥಳೀಯರು ಮಾಲೀಕರಿಗೆ ಮಾಹಿತಿ ತಿಳಿಸಿದ್ದಾರೆ.

ತಕ್ಷಣ ಮನೆಯ ಮಾಲೀಕರು ಆನಂದಪುರಕ್ಕೆ ಆಗಮಿಸಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, 330 ಗ್ರಾಮ ಬಂಗಾರದ ಆಭರಣ ಹಾಗೂ 90,000 ನಗದು ಮನೆಯ ಬೀರುವಿನಲ್ಲಿದ್ದು ಅದನ್ನು ಕಳ್ಳರು ದೋಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತನಿಖೆ ಕೈಗೊಂಡಿದ್ದಾರೆ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.