ಅಕ್ರಮವಾಗಿ ಚಿರತೆಯ ಉಗುರು ಮಾರಾಟ ಮಾಡಲು ಯತ್ನಿಸುತಿದ್ದ ವೇಳೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಪೊಲೀಸ್ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡ ಘಟನೆ ಶಿವಮೊಗ್ಗದ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಬಳಿ ನಡೆದಿದೆ.
ಖಚಿತ ಮಾಹಿತಿಯನ್ನು ಆಧರಿಸಿ ಶಿವಮೊಗ್ಗದ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಬಳಿ ದಾಳಿ ನಡೆಸಿದ ಪೊಲೀಸ್ ಅರಣ್ಯ ಸಂಚಾರಿ ದಳ ಅಕ್ರಮವಾಗಿ ಚಿರತೆ ಉಗುರನ್ನು ಮಾರಾಟ ಮಾಡಲು ಯತ್ನಿಸುತಿದ್ದ ಸಿದ್ದಾಪುರ ನಿವಾಸಿ ಗಣಪತಿ ಬಿನ್ ಲಕ್ಷಣನಾಯ್ಕ್ ಎಂಬಾತನನ್ನು ಬಂಧಿಸಿ ಆರೋಪಿಯಿಂದ ಚಿರತೆ ಉಗುರುಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ದಾಳಿಯಲ್ಲಿ ಪಿಎಸ್ಐ ವಿನಾಯಕ. ಸಿಬ್ಬಂದಿಯವರಾದ ಗಿರೀಶ, ಕೃಷ್ಣ ವಿಶ್ವನಾಥ್, ಗಣೇಶ್,ಮಹೇಶ್ ,ಚೈತ್ರಾ ಮತ್ತು ದಿನೇಶ ಇದ್ದರು.