ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಇಂದು(17-02-2023) ಸ್ವಾಮಿ ವಿವೇಕಾನಂದ ಖೋ ಖೋ ಗೆಳೆಯರ ಬಳಗದ ವತಿಯಿಂದ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಖೋಖೋ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಪಟ್ಟಣದ ಶಿವಮೊಗ್ಗ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಖೋಖೋ ಕ್ರೀಡಾಪಟು ಪೃಥ್ವಿ ಸ್ಮರಣಾರ್ಥ ಅಂತರ್ ಜಿಲ್ಲಾ ಮಟ್ಟದ 4ನೇ ವರ್ಷದ ಹಗಲು,ಹೊನಲು-ಬೆಳಕಿನ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಖೋಖೋ ಕ್ರೀಡಾಪಟುಗಳು ಈ ಕ್ರೀಡಾಕೂಟಕ್ಕೆ ಭಾಗವಹಿಸುತಿದ್ದು ಅತ್ಯಂತ ರೋಚಕ ಪಂದ್ಯಾವಳಿಗಳು ನಡೆಯಲಿದೆ.