ವಿದ್ಯುತ್ ಅವಘಡದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದ ಶಾಸಕ ಹರತಾಳು ಹಾಲಪ್ಪ|mescom

ರಿಪ್ಪನ್‌ಪೇಟೆ : ಇತ್ತೀಚೆಗೆ ಹರತಾಳು ಗ್ರಾ.ಪಂ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಧನವನ್ನು ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ವಿತರಿಸಿದರು.




ಇತ್ತೀಚೆಗೆ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಶೇಷಗಿರಿ ಬಿನ್ ಬಸವನಾಯ್ಕ ರವರು ಮೃತಪಟ್ಟಿದ್ದು, ಮೃತರ ವಾರಸುದಾರರಾದ ಸುಧಾರಾಣಿ ಶೇಷಗಿರಿಯವರಿಗೆ ಸಾಗರದಲ್ಲಿ 5 ಲಕ್ಷ ರೂ ಗಳ ಪರಿಹಾರ ಧನದ ಆದೇಶ ಪ್ರತಿ ಹಸ್ತಾಂತರಿಸಿ, ಸಾಂತ್ವನ ಹೇಳಿದರು.

ಈ ಸಂಧರ್ಭದಲ್ಲಿ ಮೆಸ್ಕಾಂ AEE ಚಂದ್ರಶೇಖರ್, ಮೃತರ ಕುಟುಂಬಸ್ಥರು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಘಟನೆಯ ಹಿನ್ನಲೆ : 

ವಿದ್ಯುತ್ ತಂತಿ ತುಳಿದು ಹರತಾಳು ಗ್ರಾಪಂ ವ್ಯಾಪ್ತಿಯ ಹರತಾಳು ಗ್ರಾಮದ ರೈತ ಶೇಷಗಿರಿ(45) ಸಾವನ್ನಪ್ಪಿರುವ ಘಟನೆ ನಂಜವಳ್ಳಿ ಗ್ರಾಮದಲ್ಲಿ  ನಡೆದಿತ್ತು.




ಅಂದು ಬೆಳಗ್ಗೆ ಮನೆಯ ಬಳಿ ಶೇಷಗಿರಿ ರವರ ಪತ್ನಿ ಹೂ ಕೀಳಲು ಹೋದಾಗ ಅವರಿಗೆ ವಿದ್ಯುತ್ ಸ್ಪರ್ಶಿಸಿ ಕೂಗಿದ್ದಾರೆ ಕೂಡಲೇ ಅವರನ್ನು ರಕ್ಷಿಸಲು ಹೋದ ಶೇಷಗಿರಿ ರವರು ಪಾದರಕ್ಷೆ ಧರಿಸದೆ ವಿದ್ಯುತ್ ತಂತಿಯನ್ನು ತುಳಿದಿದ್ದರು

ಮೂಲತಃ ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಗ್ರಾಮದ ಒಡ್ಡಿನಬೈಲು ನಿವಾಸಿಯಾಗಿದ್ದ ಶೇಷಗಿರಿ ಜಮೀನು ಖರೀದಿಸಿ ಹರತಾಳು ಗ್ರಾಮದಲ್ಲಿ ವಾಸಿಸುತ್ತಿದ್ದರು.



Leave a Reply

Your email address will not be published. Required fields are marked *