ಕಲುಷಿತಗೊಂಡಿದ್ದ ಕುಡಿಯುವ ನೀರಿನ ಬಾವಿ – ಬಾವಿಗಿಳಿದು ಸ್ವಚ್ಚಗೊಳಿಸಿದ ಗ್ರಾಪಂ ಸದಸ್ಯ : ಪ್ರಶಂಸೆಗಳ ಸುರಿಮಳೆ|inspiration news

ಸ್ವಚ್ಚತೆ ಇಲ್ಲದೆ ದೇಶವಿಲ್ಲ. ಸಚ್ಚತೆಯೆಂಬುದು ದೇಶದ ಪ್ರಗತಿಯಾಗಿದೆ. ಈ ಯೋಜನೆಯು ಜನರ ಹಾಗು ದೇಶದ ಹಿತವನ್ನು ಬಯಸುತ್ತದೆ. ಸ್ವಚ್ಚಂದವಾದ ಪರಿಸರವನ್ನು ಅಥವಾ ವಾತವರಣವನ್ನು ನೋಡಬಹುದು. ಈ ಸ್ವಚ್ಚ ಭಾರತ ಅಭಿಯಾನ ಗಾಂಧೀಜಿಯವರು ಕಂಡ ಕನಸಾಗಿತ್ತು.




ಇಂತಹ ಸ್ವಚ್ಚ ಅಭಿಯಾನವನ್ನು ಹಲವಾರು ರೀತಿಯಲ್ಲಿ ಮಾಡಿರುವುದನ್ನು ನೋಡಿದ್ದೇವೆ ಆದರೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಸ್ವಚ್ಚ ಅಭಿಯಾನವನ್ನು ವಿಶೇಷ ರೀತಿಯಲ್ಲಿ ನಡೆಸಿದ್ದಾರೆ.ಹೌದು…ಅಮೃತ ಗ್ರಾಪಂ ಸದಸ್ಯರಾದ ಸುರೇಶ್ ರವರು ಸ್ವಚ್ಚ ಅಭಿಯಾನದಡಿಯಲ್ಲಿ ಅಂತಹದೊಂದು ಕೆಲಸ ಮಾಡಿದ್ದಾರೆ.




ಅಮೃತ ಗ್ರಾಮದಲ್ಲಿ ಹಲವಾರು ಜನರಿಗೆ ಕುಡಿಯಲು ನೀರಿಗೆ ಆಶ್ರಯವಾಗಿದ್ದ ಬಾವಿಗೆ ಕಸ ಕಡ್ಡಿಗಳು ಬಿದ್ದು ಕಲುಷಿತವಾಗಿತ್ತು ಇದನ್ನು ಮನಗಂಡ ಗ್ರಾಪಂ ಸದಸ್ಯ ಸುರೇಶ ಸ್ವತಃ ತಾವೇ ಬಾವಿಗೆ ಇಳಿದು ಸ್ವಚ್ಚಗೊಳಿಸಿದ್ದಾರೆ.

ಇವರ ಈ ಕಾರ್ಯ ವೈಖರಿಗೆ ಗ್ರಾಪಂ ಸದಸ್ಯರು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



Leave a Reply

Your email address will not be published. Required fields are marked *