ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಗುಡ್ಡೆಕೊಪ್ಪದ ಸರ್ಕಾರಿ ಶಾಲೆಗೆ ಆಗಮಿಸಿ ಕುಟುಂಬದ ಜೊತೆ ಬಂದು ಮತ ಚಲಾಯಿಸಿದರು.
ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಒಂದೇ ಪಕ್ಷದಿಂದ ದಾಖಲೆಯ ಹತ್ತನೇ ಬಾರಿಗೆ ಸ್ಪರ್ಧಿಸುತ್ತಿರುವ, ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಇಂದು ತಮ್ಮ ಕುಟುಂಬದ ಸದಸ್ಯರೊಂದಿಗೆ, ಮತ ಗಟ್ಟೆಗೆ ಆಗಮಿಸಿ, ಮತದಾನ ಮಾಡಿದರು.
ಹಾಗೂ ಪ್ರತಿಯೊಬ್ಬರು ಕೂಡ ತಪ್ಪದೆ ಮತ ಚಲಾಯಿಸಿ ಎಂದು ಮನವಿ ಮಾಡಿದರು.