ಚಿಕ್ಕಜೇನಿ ಗ್ರಾ.ಪಂ.ಅಧ್ಯಕ್ಷರಾಗಿ ಎನ್.ಪಿ.ರಾಜು.ಉಪಾಧ್ಯಕ್ಷರಾಗಿ ಸುಜಾತ ಆವಿರೋಧ ಅಯ್ಕೆ
ರಿಪ್ಪನ್ಪೇಟೆ;-ಸಮೀಪದ ಚಿಕ್ಕಜೇನಿ ಗ್ರಾಮ ಪಂಚಾಯ್ತಿಗೆ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಅಯ್ಕೆಯಲ್ಲಿ ಅಧ್ಯಕ್ಷರಾಗಿ ಎನ್.ಪಿ.ರಾಜು ಉಪಾಧ್ಯಕ್ಷರಾಗಿ ಸುಜಾತ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
10 ಸದಸ್ಯರನ್ನು ಹೊಂದಿರುವ ಈ ಗ್ರಾಮ ಪಂಚಾಯ್ತಿಯಲ್ಲಿ ಒಮ್ಮತದೊಂದಿಗೆ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ,ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ,ಸಹಕಾರಿ ಧುರೀಣ ಎಂ ಎಂ ಪರಮೇಶ್ ಹಾಗೂ ಇನ್ನಿತರರು ಶುಭಾಶಯಗಳನ್ನು ಕೋರಿದ್ದಾರೆ.