w
Headlines
Home » ಕಗ್ಗಲಿ ಗ್ರಾಮದ ಹಿರಿಯ ಜೀವ ನಾಗಮ್ಮ ಶಿವಪ್ಪಗೌಡ ಇನ್ನಿಲ್ಲ | 96ನೇ ವಯಸ್ಸಿನಲ್ಲಿ ವಿಧಿವಶ

ಕಗ್ಗಲಿ ಗ್ರಾಮದ ಹಿರಿಯ ಜೀವ ನಾಗಮ್ಮ ಶಿವಪ್ಪಗೌಡ ಇನ್ನಿಲ್ಲ | 96ನೇ ವಯಸ್ಸಿನಲ್ಲಿ ವಿಧಿವಶ

Screenshot 2026 11 14 18 32 08 115 com.openai.chatgpt edit

ಕಗ್ಗಲಿ ಗ್ರಾಮದ ಹಿರಿಯ ಜೀವ ನಾಗಮ್ಮ ಶಿವಪ್ಪಗೌಡ ಇನ್ನಿಲ್ಲ | 96ನೇ ವಯಸ್ಸಿನಲ್ಲಿ ವಿಧಿವಶ | Nagamma Shivappagowda (96) of Kaggali village in Ripponpete passed away due to age-related ailments. Her last rites will be held on Sunday at 11 AM.

ರಿಪ್ಪನ್‌ಪೇಟೆ: ಇಲ್ಲಿನ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲಿ ಗ್ರಾಮದ ಹಿರಿಯರಾದ ನಾಗಮ್ಮ ಶಿವಪ್ಪಗೌಡ (96) ಅವರು ವಯೋಸಹಜವಾಗಿ ನಿಧನರಾಗಿದ್ದಾರೆ.

ಕಗ್ಗಲಿ ಮನೆತನದ ದಿವಂಗತ ಶಿವಪ್ಪಗೌಡ ಅವರ ಪತ್ನಿಯಾಗಿದ್ದ ನಾಗಮ್ಮ ಶಿವಪ್ಪಗೌಡ ಅವರು ಸರಳ ಜೀವನಶೈಲಿ ಹಾಗೂ ಸಮಾಜಮುಖಿ ಸೇವೆಯ ಮೂಲಕ ಗ್ರಾಮದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು. ಅವರ ನಿಧನದಿಂದ ಕುಟುಂಬಸ್ಥರು, ಬಂಧುಗಳು ಹಾಗೂ ಗ್ರಾಮಸ್ಥರಲ್ಲಿ ಶೋಕ ಆವರಿಸಿದೆ.

ನಾಗಮ್ಮ ಶಿವಪ್ಪಗೌಡ ಅವರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ 11 ಗಂಟೆಗೆ ಕಗ್ಗಲಿ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಗಣ್ಯರಿಂದ ಸಂತಾಪ :

ನಾಗಮ್ಮ ಶಿವಪ್ಪಗೌಡ ಅವರ ನಿಧನಕ್ಕೆ ಶಾಸಕರಾದ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, ಸ್ಥಳೀಯ ಬಿಜೆಪಿ ಮುಖಂಡ ಕಗ್ಗಲಿ ಲಿಂಗಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಎನ್. ವರ್ತೇಶ್, ಗರ್ತಿಕೆರೆ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷ ಸಚಿನ್ ಗೌಡ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.