w
Headlines
Home » ರಿಪ್ಪನ್‌ಪೇಟೆ: ಅಂಗನವಾಡಿಗೆ ಕನ್ನ ಹಾಕಿದ ಕಳ್ಳರು; ಮಕ್ಕಳ ಮೊಟ್ಟೆ ಬೇಯಿಸಿ ತಿಂದು ಪರಾರಿ!

ರಿಪ್ಪನ್‌ಪೇಟೆ: ಅಂಗನವಾಡಿಗೆ ಕನ್ನ ಹಾಕಿದ ಕಳ್ಳರು; ಮಕ್ಕಳ ಮೊಟ್ಟೆ ಬೇಯಿಸಿ ತಿಂದು ಪರಾರಿ!

Screenshot 2026 11 13 18 56 56 189 com.openai.chatgpt edit

ರಿಪ್ಪನ್‌ಪೇಟೆ: ಅಂಗನವಾಡಿಗೆ ಕನ್ನ ಹಾಕಿದ ಕಳ್ಳರು; ಮಕ್ಕಳ ಮೊಟ್ಟೆ ಬೇಯಿಸಿ ತಿಂದು ಪರಾರಿ! | Thieves broke into an Anganwadi centre at Dadaphasala village near Ripponpete, scattered food supplies and cooked and ate eggs stored for children.

ರಿಪ್ಪನ್‌ಪೇಟೆ: ಅಂಗನವಾಡಿಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಮಕ್ಕಳಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಮೊಟ್ಟೆಗಳನ್ನು ಅಲ್ಲಿಯೇ ಬೇಯಿಸಿಕೊಂಡು ತಿಂದು ಪರಾರಿಯಾಗಿರುವ ಘಟನೆ ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಸಮೀಪದ ದಡಫೆಸಲ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.

ದೀಪಾವಳಿ ಬಲಿಪಾಡ್ಯಮಿ ಪ್ರಯುಕ್ತ ಮಂಗಳವಾರ ಅಂಗನವಾಡಿ ಕೇಂದ್ರಕ್ಕೆ ರಜೆ ನೀಡಲಾಗಿತ್ತು. ರಜೆಯ ಬಳಿಕ ಬುಧವಾರ ಬೆಳಿಗ್ಗೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಕೇಂದ್ರಕ್ಕೆ ಆಗಮಿಸಿದಾಗ ಹಿಂಬಾಗಿಲು ತೆರೆದಿರುವುದು ಕಂಡುಬಂದಿದೆ.

ಅನುಮಾನಗೊಂಡು ಒಳಗೆ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳರು ಅಂಗನವಾಡಿಯ ಹಿಂಬಾಗಿಲನ್ನು ಮುರಿದು ಒಳಪ್ರವೇಶಿಸಿದ್ದು, ಕೇಂದ್ರದಲ್ಲಿದ್ದ ಡಬ್ಬಗಳಲ್ಲಿನ ಆಹಾರ ಪದಾರ್ಥಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.

ಇಷ್ಟಕ್ಕೇ ನಿಲ್ಲದ ಕಳ್ಳರು, ಮಕ್ಕಳಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಮೊಟ್ಟೆಗಳನ್ನು ಅಂಗನವಾಡಿಯಲ್ಲಿದ್ದ ಗ್ಯಾಸ್ ಒಲೆಯಲ್ಲೇ ಬೇಯಿಸಿಕೊಂಡು ತಿಂದು ಹೋಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮಕ್ಕಳ ಆಹಾರಕ್ಕಾಗಿ ಮೀಸಲಿಟ್ಟಿದ್ದ ಮೊಟ್ಟೆಗಳನ್ನೇ ಕಳ್ಳರು ಕದ್ದುಕೊಂಡು ಹೋಗಿರುವ ಘಟನೆ ಸ್ಥಳೀಯರಲ್ಲಿ ಅಚ್ಚರಿ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.