w
Headlines
Home » ತಾಯಿ-ಮಗ ನಾಪತ್ತೆ: ಸುಳಿವು ನೀಡುವಂತೆ ಪೊಲೀಸರ ಮನವಿ

ತಾಯಿ-ಮಗ ನಾಪತ್ತೆ: ಸುಳಿವು ನೀಡುವಂತೆ ಪೊಲೀಸರ ಮನವಿ

Screenshot 2026 10 07 18 10 10 110 com.openai.chatgpt edit

ತಾಯಿ-ಮಗ ನಾಪತ್ತೆ: ಸುಳಿವು ನೀಡುವಂತೆ ಪೊಲೀಸರ ಮನವಿ | Mother and son missing in Shivamogga after leaving home for school on October 5. Doddapete Police seek public information to trace Farida Khanam and her 4-year-old son Umeer.

ಶಿವಮೊಗ್ಗ, ಅ. 7: ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ಬಡಾವಣೆ 1ನೇ ಕ್ರಾಸ್ ನಿವಾಸಿ ಇಸ್ಮಾಯಿಲ್ ಅವರ ಪುತ್ರಿ ಫರೀದಾ ಖಾನಂ ಜೀಶಾನ್ (27) ಹಾಗೂ ಅವರ 4 ವರ್ಷದ ಪುತ್ರ ಉಮೇರ್ ನಾಪತ್ತೆಯಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.

ಫರೀದಾ ಖಾನಂ ಅವರು ಅ.5ರಂದು ತಮ್ಮ ಪುತ್ರ ಉಮೇರ್‌ನನ್ನು ಕರೆದುಕೊಂಡು ಶಾಲೆಗೆಂದು ಮನೆಯಿಂದ ತೆರಳಿದ್ದರು. ಬಳಿಕ ಇಬ್ಬರೂ ಮನೆಗೆ ವಾಪಸ್ ಆಗದೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಕಾಣೆಯಾದ ಫರೀದಾ ಖಾನಂ ಅವರು 5.2 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದಾರೆ.

ಅವರ ಪುತ್ರ ಉಮೇರ್ ಸುಮಾರು 2.5 ಅಡಿ ಎತ್ತರ, ಕೋಲುಮುಖ ಹಾಗೂ ತೆಳುವಾದ ಮೈಕಟ್ಟು ಹೊಂದಿದ್ದು, ಮನೆಯಿಂದ ತೆರಳುವಾಗ ನೀಲಿ ಬಣ್ಣದ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದನು.

ತಾಯಿ-ಮಗನ ಕುರಿತು ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ 08182-261414, 9480803345 ಅಥವಾ 9632171696 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.