ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ : ಯೋಗಪಟು , ಯುವ ರಂಗಕಲಾವಿದ ಹರ್ಷ ಸ್ಥಳದಲ್ಲೇ ಸಾವು | Young theatre artist and yoga practitioner Harsha, 28, died on the spot after his bike collided with an electric pole near Honnatti Hosur in Bhadravati taluk, Shivamogga district.
ಶಿವಮೊಗ್ಗ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವ ರಂಗಕಲಾವಿದ ಹಾಗೂ ಯೋಗಪಟು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭದ್ರಾವತಿ ತಾಲೂಕಿನ ಗೋಣಿಬೀಡು ಸಮೀಪದ ಹೊನ್ನಟ್ಟಿ ಹೊಸೂರು ಬಳಿ ನಡೆದಿದೆ.
ಮೃತರನ್ನು ಭದ್ರಾವತಿ ತಾಲೂಕಿನ ಹರ್ಷ (28) ಎಂದು ಗುರುತಿಸಲಾಗಿದೆ. ರಂಗಭೂಮಿ ಕಲಾವಿದನಾಗಿ ಹಾಗೂ ಯೋಗಪಟುವಾಗಿ ಗುರುತಿಸಿಕೊಂಡಿದ್ದ ಹರ್ಷ, ತಮ್ಮ ಸಂಬಂಧಿಯೊಬ್ಬರನ್ನು ಭದ್ರಾವತಿಗೆ ಬಿಟ್ಟು ಬರಲು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಹರ್ಷ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
