ರಿಪ್ಪನ್‌ಪೇಟೆಯಲ್ಲಿ 59ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಭವ್ಯ ಮೆರವಣಿಗೆ

ರಿಪ್ಪನ್‌ಪೇಟೆಯಲ್ಲಿ 59ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಭವ್ಯ ಮೆರವಣಿಗೆ

Ripponpete celebrates the 59th annual Ganapati festival with a grand procession, attracting devotees and the public. Various religious and cultural programmes are scheduled as part of the celebrations.

ರಿಪ್ಪನ್‌ಪೇಟೆ : ಸ್ಥಳೀಯ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ 59ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಮೆರವಣಿಗೆ ಪಟ್ಟಣದಲ್ಲಿ ಭವ್ಯವಾಗಿ ಜರುಗಿತು. ವಿನಾಯಕ ವೃತ್ತದಲ್ಲಿ ಹಿಂದೂ ಧ್ವಜಾರೋಹಣ ನೆರವೇರಿಸಿದ ನಂತರ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ 11 ದಿನಗಳ ಗಣಪತಿ ಪ್ರತಿಷ್ಠಾಪನಾ ಪೂಜೆ ಭಕ್ತಿಭಾವದಿಂದ ಆರಂಭವಾಯಿತು.

ವಿನಾಯಕ ವೃತ್ತದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಮಾಜಿ ಅಧ್ಯಕ್ಷ ಭೀಮರಾಜ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷರಾದ ಸುಧೀಂದ್ರ ಪೂಜಾರಿ ಹಿಂದೂ ಮಹಾಸಭಾ ಮುಖಂಡರಾದ ಎಂ.ಬಿ. ಮಂಜುನಾಥ, ಎಂ. ಸುರೇಶಸಿಂಗ್, ರಾಜಾ ರಾಧಕೃಷ್ಣ ಪಿಳ್ಳೆ , ಆರ್. ರಾಘವೇಂದ್ರ, ಮುರುಳಿಧರ, ಲಕ್ಷ್ಮಣ ಆಟೋ, ರಾಮಚಂದ್ರ ಬಳೆಗಾರ್, ಶ್ರೀನಿವಾಸ ಆಚಾರ್, ನವೀನ್ , ವಿಜಯ್ ಸಾಮಿಲ್ , ವಿಷ್ಣು ವಿದ್ಯಾನಗರ , ರಂಜನ್ ಕೆರೆಹಳ್ಳಿ , ರಾಘವೇಂದ್ರ ಚಿಪ್ಲಿ , ಶ್ರೀಧರ, ವೈ.ಜೆ. ಕೃಷ್ಣ, ಸಂತೋಷ, ನವೀನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಗಣಪತಿ ಹಬ್ಬದ ಅಂಗವಾಗಿ ಮುಂದಿನ 11 ದಿನಗಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಪ್ರತಿದಿನ ರಾತ್ರಿ 8.30ಕ್ಕೆ ರಂಜಿಸಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ:

​ಸೆ. 15: ರಿಪ್ಪನ್‌ಪೇಟೆ ಶಾರದಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸುಶ್ರಾವ್ಯ ಸಂಗೀತ ಕಾರ್ಯಕ್ರಮ.

​ಸೆ. 16: ಅಲಸೆ ಚಂಡಿಕೇಶ್ವರಿ ಮೇಳದ ಕಲಾವಿದರಿಂದ ‘ಶೂರ್ಪನಖಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ.

​ಸೆ. 17: ಗವಟೂರು ಸರ್ಕಾರಿ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ರಸಮಂಜರಿ.

​ಸೆ. 18: ಶಿಕ್ಷಕ ತೀರ್ಥಕುಮಾರ್ ಸಾರಥ್ಯದ ಹಂಸವೇಣಿ ಕಲಾ ತಂಡದಿಂದ ರಸಮಂಜರಿ.

​ಸೆ. 19: ಶಾರದಾಂಬ ಸಾಂಸ್ಕೃತಿಕ ಕಲಾ ಕೇಂದ್ರದಿಂದ ಭರತನಾಟ್ಯ ಹಾಗೂ ಕುಂದಾಪುರದ ಕವಿತಾ ಆಚಾರ್ಯ ಮುದೂರು ಅವರಿಂದ ದಿಕ್ಸೂಚಿ ಭಾಷಣ.

​ಸೆ. 20: ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ‘ಸಂಗೀತ ಗಾನ ಸಂಭ್ರಮ.

​ಸೆ. 21: ಉಪ್ಪಾಡಿ ತ್ರಿನೇತ್ರ ಕಲಾ ತಂಡದಿಂದ ಹೊಟ್ಟೆ ಹುಣ್ಣಾಗಿಸುವ ಹಾಸ್ಯ ನಾಟಕ ‘ತಿರುಪತಿ ಎಕ್ಸ್‌ಪ್ರೆಸ್’.

​ಸೆ. 22: ಸುಧಾ ಗೌಡ ಮತ್ತು ತಂಡದಿಂದ ಮಧುರ ಸಂಗೀತ ರಸಮಂಜರಿ.

​ಸೆ. 23: ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಕಣ್ಮನ ಸೆಳೆಯುವ ‘ನೃತ್ಯ ವೈಭವ’.

ಭವ್ಯ ರಾಜಬೀದಿ ಉತ್ಸವ:

ಸೆಪ್ಟೆಂಬರ್ 24ರಂದು ಮಧ್ಯಾಹ್ನ 12.30ಕ್ಕೆ ಗಣೇಶನ ವಿಸರ್ಜನಾ ಪೂಜೆ ನೆರವೇರಲಿದ್ದು, ತದನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀಯವರ ಅದ್ದೂರಿ ರಾಜಬೀದಿ ಉತ್ಸವ (ಶೋಭಾಯಾತ್ರೆ) ಜರುಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಬಾರಿಯ ಉತ್ಸವವನ್ನು ಯಶಸ್ವಿಗೊಳಿಸುವಂತೆ ಸಮಿತಿ ಕೋರಿದೆ.

About The Author