`ವರುಣನ ಕೃಫೆಗಾಗಿ ಮೂಲೆಗದ್ದೆ ಶ್ರೀಗಳಿಂದ ಮೌನ ಶಿವಜಪಾನುಷ್ಠಾನ ಪೂಜೆ’’
ರಿಪ್ಪನ್ಪೇಟೆ;-ಶ್ರಾವಣ ಮಾಸದಲ್ಲಿ ಶಿವಪೂಜೆಯೊಂದಿಗೆ ಶಿವಮಂತ್ರ ಪಠಣ ಮಾಡುವುದರಿಂದ ಪಾಪ ದೂರವಾಗಿ ಪುಣ್ಯಪ್ರಾಪ್ತಿಯಾಗುವುದೆಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಮಠದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿ ಹೇಳಿದರು.
ಅವರು ಸಮೀಪದ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಮಠದಲ್ಲಿ “ಶ್ರಾವಣ ಮಾಸದ ಅಂಗವಾಗಿ ಅಯೋಜಿಸಲಾದ ಶಿವಪೂಜೆ’’ ಕಾರ್ಯಕ್ರಮದೊಂದಿಗೆ ಮಳೆಯಿಲ್ಲದೇ ರೈತರು ಕಂಗಾಲಾಗಿದ್ದು ವರುಣನ ಕೃಫೆಗಾಗಿ ಶ್ರೀಗಳು ಮೌನಜಪಾನುಷ್ಟಾನ ಶಿವಪೂಜೆಯನ್ನು ನೆರವೇರಿಸಿದರು.
ಈ ಪೂಜಾ ಕಾರ್ಯದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿ ದರ್ಶನಾಶೀರ್ವಾದ ಪಡೆದರು.