ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ! ಸ್ಥಳದಲ್ಲೇ ಇಬ್ಬರು ಸಾವು
ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ನಡೆದಿದ್ದೇನು?
ಬೆಂಗಳೂರು ಕಡೆಯಿಂದ ಡಿಟ್ಜ್ ಕಾರು ಶಿವಮೊಗ್ಗದಿಂದ ಚೆನ್ನಗಿರಿ ಕಡೆಗೆ ತೆರಳುತ್ತಿದ್ದ ಡಾಟ್ಸನ್ ಕಾರು ಮುಖಾಮುಖಿ ಡಿಕ್ಕಿಯಾಗಿವೆ . ಜಾವಳ್ಳಿ ಕ್ರಾಸ್ ಬಳಿಯಲ್ಲಿ ಘಟನೆ ಸಂಭವಿಸಿದೆ. ಡಾಟ್ಸನ್ ಕಾರಿನಲ್ಲಿದ್ದ ,ರುಗಳು ಮುಖಾಮುಖಿ ಡಿಕ್ಕಿಯಾಗಿದ್ದು ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಜಾವಳ್ಳಿ ಸಮೀಪ ಘಟನೆ ಸಂಭವಿಸಿದೆ. ಘಟನೆಯಲ್ಲಿ ಅಪ್ತಾಬ್ ಭಾಷ ಹಾಗೂ 12 ವರ್ಷದ ಮದೀಹ ಎಂಬವರು ನಿಧನರಾಗಿದ್ದಾರೆ. ಇವರು ಇಲಿಯಾಸ್ ನಗರದ ನಿವಾಸಿಗಳಾಗಿದ್ದು, ದರ್ಗಾವೊಂದಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಇನ್ನೂ ಗಾಯಾಳುಗಳಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.