Headlines

ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, 1.270 ಕೆಜಿ ಗಾಂಜಾ ವಶ

ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, 1.270 ಕೆಜಿ ಗಾಂಜಾ ವಶ

Two persons were arrested by Thunganagar Police in Shivamogga for allegedly selling ganja. Police seized 1.270 kg of ganja worth ₹60,000 and ₹600 cash.

ಶಿವಮೊಗ್ಗ, ಜುಲೈ 3: ನಗರದ ಅನುಪಿನಕಟ್ಟೆ ರಸ್ತೆಯ ತುಂಗಾ ಮೇಲ್ದಂಡೆ ಚಾನಲ್ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ತುಂಗಾನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸೈಯ್ಯದ್ ಅಹಮ್ಮದ್ ಅಲಿಯಾಸ್ ಗುಡ್ಡು (24) ಹಾಗೂ ಮಲ್ಲಿಕ್ ಅಲಿಯಾಸ್ ತಬ್ರೇಜ್ (22) ಎಂದು ಗುರುತಿಸಲಾಗಿದೆ.

ತುಂಗಾ ಮೇಲ್ದಂಡೆ ಚಾನಲ್ ಸಮೀಪ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ತುಂಗಾನಗರ ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ ಸುಮಾರು ₹60,000 ಮೌಲ್ಯದ 1 ಕೆಜಿ 270 ಗ್ರಾಂ ಗಾಂಜಾ ಹಾಗೂ ₹600 ನಗದುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

About The Author