Headlines

ಜುಲೈ 04 ರಂದು ರಿಪ್ಪನ್ ಪೇಟೆ ರೋಟರಿ ಕ್ಲಬ್ ನ ಪದಗ್ರಹಣ ಸಮಾರಂಭ

ಜುಲೈ 04 ರಂದು ರಿಪ್ಪನ್ ಪೇಟೆ ರೋಟರಿ ಕ್ಲಬ್ ನ ಪದಗ್ರಹಣ ಸಮಾರಂಭ

ಅಧ್ಯಕ್ಷರಾಗಿ ರವೀಂದ್ರ ಬಲ್ಲಾಳ್ ಕಾರ್ಯದರ್ಶಿಯಾಗಿ ರಮೇಶ್ ಹೆಬ್ಬಾರ್ ಪದವಿ ಸ್ವೀಕಾರ

Rotary Club Ripponpet will hold its 2026-27 Installation Ceremony on July 4, featuring the induction of President Ravindra Ballal and Secretary Ramesh Hebbar, along with a merit awards program honoring outstanding SSLC, PUC, and degree students.

ರಿಪ್ಪನ್‌ಪೇಟೆ : ಜುಲೈ04 ರಂದು ಶನಿವಾರ ಸಂಜೆ 05-30 ಕ್ಕೆ   ಪಟ್ಟಣದ ಜಿಎಸ್ ಬಿ ಕಲ್ಯಾಣ ಮಂಟಪದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಹಾಗೂ ಪದವಿ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಆಂಕಗಳಿಸಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂ 2026-27 ನೇ ಸಾಲಿನ ನೂತನ ರೋಟರಿ ಕ್ಲಬ್ ಪದವಿ ಸ್ವೀಕಾರ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ನೂಇತನ ಅಧ್ಯಕ್ಷ ರವೀಂದ್ರ ಬಲ್ಲಾಳ್ ಕೆ ತಿಳಿಸಿದರು.

ಪಟ್ಟಣದ ರೋಟರಿಕ್ಲಬ್‌ನ ಸಭಾಂಗಣದಲ್ಲಿ  ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಜಿಲ್ಲಾ ಎಲೆಕ್ಟ್ ಗವರ್ನರ್ ರೊ. ಸವಂತ ಹೋಬಳಿದಾ‌ರ್ ನೂತನ ಪದಾಧಿಕಾರಿಗಳಿಗೆ ಪದವಿ ಪ್ರಧಾನ ಮಾಡುವರು. ಅಸಿಸ್ಟೆಂಟ್ ಗವರ್ನರ್ ರೊ. ಪಿಹೆಚ್‌ಎಫ್ ನಾಗರಾಜ್ ಎಸ್, ರೋನಲ್ ಲೆಪ್ಟಿನೆಂಟ್ ರೊ. ವಿಷ್ಣುಮೂರ್ತಿ ಎಸ್.ಎಂ.ಮುಖ್ಯ ಅತಿಥಿಗಳಾಗಿ ಭಾಗವಹಿಲಿದ್ದಾರೆಂದು.

ರೋಟರಿಕ್ಲಬ್ ಹಾಲಿ ಅಧ್ಯಕ್ಷ ಕೃಷ್ಣರಾಜ್  ಹಾಗೂ 2026-27 ನೇ ಸಾಲಿನ ರೋಟರಿ ಕ್ಲಬ್ ನೂತನ ಅಧ್ಯಕ್ಷ ರೊ. ರವೀಂದ್ರ ಬಲ್ಲಾಳ್ ಕಾರ್ಯದರ್ಶಿ ರಮೇಶ್ ಹೆಬ್ಬಾರ್ ಇವರಿಗೆ ಪದವಿ ಹಸ್ತಾಂತರ ಮಾಡಲಿದ್ದಾರೆ  ಎಂದು ತಿಳಿದರು.

ರಿಪ್ಪನ್ ಪೇಟೆ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರೋಟರಿ ಜಿಲ್ಲಾ 31 82 ವಲಯ11ರ ಅಸಿಸ್ಟೆಂಟ್ ಗವರ್ನರ್ ಎಂ.ಬಿ ಲಕ್ಷ್ಮಣಗೌಡ ಮಾತನಾಡಿ  ಆರೋಗ್ಯ ಶಿಕ್ಷಣ ಸಮಾಜ ಸೇವೆ ಮತ್ತು ಆತಿಥ್ಯದ ಸಲುವಾಗಿ ಸ್ಥಾಪಿಸಲು ಪಟ್ಟ ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿ ಸಂಸ್ಥೆ ರಿಪ್ಪನ್ ಪೇಟೆಯಲ್ಲಿ ಪ್ರಾರಂಭವಾಗಿ ಇದೀಗ 15 ವರ್ಷಗಳಾಯಿತು, ಆರೋಗ್ಯ ಶಿಕ್ಷಣ, ಕೃಷಿ, ಮತ್ತು ಪಶು ಸಂಗೋಪನೆ  ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ನೂರಾರು ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜ ಸೇವೆಯನ್ನು ಮಾಡುವ ಸದುದ್ದೇಶವನ್ನು ಹೊಂದಿರುವ ನಾಗರಿಕರಿಗೆ ರೋಟರಿ ಸಂಸ್ಥೆಯು ಅತ್ಯುತ್ತಮವಾದ ವೇದಿಕೆಯಾಗಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ರೋಟರಿ ಕ್ಲಬ್ ನ ಗಣೇಶಕಾಮತ್, ಜೆ.ರಾಧಾಕೃಷ್ಣ, ಡಾಕಪ್ಪ, ನಿ.ಮುಖ್ಯ ಶಿಕ್ಷಕ ರಾಧಾಕೃಷ್ಣ ಆರ್, ನೂತನ ಸಮಿತಿಯ ಕಾರ್ಯದರ್ಶಿ ರಮೇಶ್ ಹೆಬ್ಬಾರ್, ನಿಕಟಪೂರ್ವ ಅಧ್ಯಕ್ಷ ಕೃಷ್ಣರಾಜ್ ಹಾಗೂ ಸಬಾಸ್ಟಿನ್ ಮಾಥ್ಯೂಸ್, ಇನ್ನಿತರ ರೋಟರಿ ಕ್ಲಬ್ ಪದಾಧಿಕಾರಿಗಳು ಹಾಜರಿದ್ದರು.

About The Author