Headlines

ರೈಲ್ವೆ ಹಳಿ ಸಮೀಪ ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಮೃತದೇಹ ಪತ್ತೆ

ರೈಲ್ವೆ ಹಳಿ ಸಮೀಪ ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಮೃತದೇಹ ಪತ್ತೆ

An unidentified young woman’s body was found near Ravindranagar railway tracks under suspicious circumstances. Police are investigating whether it was a train accident or another cause of death.

ಶಿವಮೊಗ್ಗ : ರವೀಂದ್ರನಗರ ರೈಲು ಹಳಿ ಬಳಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮೃತದೇಹದ ಮುಖ ಭಾಗ ಸಂಪೂರ್ಣ ಹಾನಿಗೊಳಗಾದ ಕಾರಣ, ಗುರುತು ಪತ್ತೆ ಮಾಡುವುದು ಕಷ್ಟಕರವಾಗಿದೆ.

ಇಂದು ಸಂಜೆ ಸುಮಾರು 4:45ರ ವೇಳೆಗೆ ತಾಳಗುಪ್ಪ–ಮೈಸೂರು ಪ್ರಯಾಣಿಕ ರೈಲುಗೆ ಸಿಲುಕಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಲೊಕೊಮೋಟಿವ್ ಇಂಜಿನ್ ಪೈಲಟ್ ರೈಲು ನಿಲ್ದಾಣಕ್ಕೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಇದು ರೈಲು ಅಪಘಾತವೇ ಅಥವಾ ಬೇರೆ ರೀತಿಯ ಅನುಮಾನಾಸ್ಪದ ಸಾವು ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಮೃತದೇಹದ ಸ್ಥಿತಿ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.

ಘಟನೆ ನಡೆದಿರುವ ರವೀಂದ್ರನಗರ ಹಾಗೂ ಬಸವೇಶ್ವರನಗರ ಭೋವಿ ಕಾಲೋನಿ ಪ್ರದೇಶದಲ್ಲಿ ಹಲವು ಪಿಜಿ ಹಾಸ್ಟೆಲ್‌ಗಳು ಇರುವುದರಿಂದ, ಮೃತ ಯುವತಿ ಹಾಸ್ಟೆಲ್ ನಲ್ಲಿ ಇದ್ದವಳೋ ಅಥವಾ ಬೇರೆಡೆಯಿಂದ ಬಂದವರೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

About The Author