w
Headlines
Home » ಮಾನವತೆ, ವಿದ್ಯೆ ಮತ್ತು ಸೇವೆ – ಶಿವಕುಮಾರ ಮಹಾಸ್ವಾಮಿಗಳ ಆದರ್ಶಗಳನ್ನು ಸ್ಮರಿಸಿದ ಶಾಂತರಾಮ್ ಪ್ರಭು

ಮಾನವತೆ, ವಿದ್ಯೆ ಮತ್ತು ಸೇವೆ – ಶಿವಕುಮಾರ ಮಹಾಸ್ವಾಮಿಗಳ ಆದರ್ಶಗಳನ್ನು ಸ್ಮರಿಸಿದ ಶಾಂತರಾಮ್ ಪ್ರಭು

GridArt 20260401

ಮಾನವತೆ, ವಿದ್ಯೆ ಮತ್ತು ಸೇವೆ – ಶಿವಕುಮಾರ ಮಹಾಸ್ವಾಮಿಗಳ ಆದರ್ಶಗಳನ್ನು ಸ್ಮರಿಸಿದ ಶಾಂತರಾಮ್ ಪ್ರಭು

Shantaram Prabhu highlighted the values of humanity and education during the 119th birth anniversary of Sri Shivakumara Mahaswamiji, emphasizing that education is the greatest form of donation.

ರಿಪ್ಪನ್ ಪೇಟೆ: ಸಿದ್ಧಗಂಗಾ ಮಠದ ಪರಮ ಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಪಟ್ಟಣದ ಗ್ರಾಮ ಪಂಚಾಯತಿ ಭವನದಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯವಾಗಿ ಮಾತನಾಡಿದ ಸಾಹಿತಿ ಶಾಂತರಾಮ್ ಪ್ರಭು, “ಜಗತ್ತು ಕಂಡ ಅಚ್ಚರಿ ವ್ಯಕ್ತಿತ್ವವಾಗಿದ್ದ ಶ್ರೀಗಳು ತಮ್ಮ ತಾರುಣ್ಯದಲ್ಲಿಯೇ ವೈಯಕ್ತಿಕ ಜೀವನವನ್ನು ತ್ಯಜಿಸಿ, ಸುಮಾರು 80 ವರ್ಷಗಳಿಗೂ ಹೆಚ್ಚು ಕಾಲ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತ, ಭೇದವಿಲ್ಲದೆ ಅನ್ನ ದಾಸೋಹ ಹಾಗೂ ವಿದ್ಯಾದಾನ ಮಾಡಿರುವ ಸಿದ್ಧಪುರುಷರು” ಎಂದು ಹೇಳಿದರು.

ಇಂದಿನ ಸಮಾಜದಲ್ಲಿ ಅಕ್ಷರಜ್ಞಾನ ಹೊಂದಿದವರೇ ಕೆಲವೊಮ್ಮೆ ಅವಿದ್ಯಾವಂತರಂತೆ ವರ್ತಿಸುತ್ತಿರುವುದು ವಿಷಾದನೀಯ ಎಂದು ಹೇಳಿದ ಅವರು, “ಅನ್ನದಾನ ಕ್ಷಣಿಕ ತೃಪ್ತಿ ನೀಡಿದರೆ, ವಿದ್ಯಾದಾನ ಜೀವನಪೂರ್ತಿ ಬೆಳಕು ನೀಡುತ್ತದೆ. ಆದ್ದರಿಂದ ವಿದ್ಯಾದಾನವೇ ಶ್ರೇಷ್ಠ ದಾನ” ಎಂದು ಅಭಿಪ್ರಾಯಪಟ್ಟರು.

ಗಾಂಧೀಜಿಯ ತತ್ವಸಿದ್ಧಾಂತವಿಲ್ಲದ ರಾಜಕಾರಣ ಮಹಾಪಾಪವಾಗಿದ್ದು, ಶೀಲವಿಲ್ಲದ ಶಿಕ್ಷಣ ಸಮಾಜಕ್ಕೆ ಶೋಭೆ ತರುವುದಿಲ್ಲ. ಸಂಸ್ಕಾರಯುತ ಶಿಕ್ಷಣದ ಮೂಲಕ ಸಮಗ್ರ ವ್ಯಕ್ತಿತ್ವ ನಿರ್ಮಾಣ ಮಾಡುವುದು ಇಂದಿನ ಅಗತ್ಯ ಎಂದು ಅವರು ಹೇಳಿದರು.

ವೀರಶೈವ ಸಮಾಜದ ಅಧ್ಯಕ್ಷ ಮಸರೂರು ಉಮೇಶ್ ಮಾತನಾಡಿ, “ಶ್ರೀಗಳ ಸೇವೆಯನ್ನು ನಾವು ಸದಾ ಸ್ಮರಿಸಬೇಕು. ಇಂತಹ ಮಹಾಪುರುಷರ ಜಯಂತಿ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಮಾನವ ಧರ್ಮದ ಸಂದೇಶಗಳು ವ್ಯಾಪಿಸುತ್ತವೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಗ್ಗಲಿ ಲಿಂಗಪ್ಪ ಅವರು, “11 ವರ್ಷಗಳ ಹಿಂದೆ ಸ್ನೇಹಿತರೊಂದಿಗೆ ಈ ಜಯಂತಿ ಆಚರಣೆಯನ್ನು ಪ್ರಾರಂಭಿಸಿದ್ದು, ಇಂದು ನೂರಾರು ಮಂದಿಗೆ ಶ್ರೀಗಳ ಆದರ್ಶಗಳು ತಲುಪುವಂತಾಗಿದೆ” ಎಂದು ಹೇಳಿದರು.

ಪಿ.ಎಸ್.ಐ ರಾಜುರೆಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶ್ರೀಧರ್ ನಿರೂಪಣೆ ಮಾಡಿದರು, ನಾಗರತ್ನ ದೇವರಾಜ್ ಪ್ರಾರ್ಥನೆ ಸಲ್ಲಿಸಿದರು, ದೂನ ಸೋಮಶೇಖರ್ ಸ್ವಾಗತಿಸಿದರು ಹಾಗೂ ಪದ್ಮಾ ಸುರೇಶ್ ವಂದಿಸಿದರು.

ಈ ಸಂದರ್ಭದಲ್ಲಿ ಸತೀಶ್ ಹೆಗಡೆ, ಅಡಿಕಟ್ಟು ಕರಿಬಸಪ್ಪ, ಆರ್. ರಾಘವೇಂದ್ರ, ಸುಧೀಂದ್ರ ಪೂಜಾರಿ, ಈಶ್ವರ್ ಶೆಟ್ಟಿ, ವರ್ತೇಶ್, ತ. ಮ. ನರಸಿಂಹ, ಮಲ್ಲಿಕಾರ್ಜುನ, ಗೋಪಾಲ್, ಲೀಲಾ ಶಂಕರ್, ಆರ್.ಡಿ. ಶೀಲಾ, ಪದ್ಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.