Headlines

ಮನೆಯಲ್ಲಿ ನೇಣು ಬಿಗಿದುಕೊಂಡು ಯುವಕ ಸಾವು

A 23-year-old man from Kolavalli village near Ripponpet died by suicide late at night after returning home. Police have registered a case and are investigating the incident.

ರಿಪ್ಪನ್ ಪೇಟೆ : ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವಳ್ಳಿ ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕೊಳವಳ್ಳಿ ನಿವಾಸಿ ಸುನೀಲ್ ಬಿನ್ ವೀರಭದ್ರ (23) ಮೃತ ಯುವಕ. ಬುಧವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಸುನೀಲ್, ನಂತರ ಸ್ನೇಹಿತನ ಮನೆಗೆ ತೆರಳುವುದಾಗಿ ಹೇಳಿ ಸಂಜೆ 5 ಗಂಟೆ ಸುಮಾರಿಗೆ ಹೊರಟಿದ್ದನು. ಬಳಿಕ ರಾತ್ರಿ ಸುಮಾರು 11 ಗಂಟೆಗೆ ಮನೆಗೆ ಮರಳಿದ್ದಾನೆ.

ಮನೆಗೆ ಬಂದ ಬಳಿಕ ಮದ್ಯಪಾನ ಮಾಡಿದ್ದ ಸ್ಥಿತಿಯಲ್ಲಿ ಇದ್ದನು ಎನ್ನಲಾಗಿದ್ದು, ತಂದೆ-ತಾಯಿಯವರೊಂದಿಗೆ ಹೊರಭಾಗದಲ್ಲಿ ಕೆಲಕಾಲ ಮಾತನಾಡಿ ಕುಳಿತಿದ್ದನು. ನಂತರ ತಂದೆ ಮಲಗಲು ತೆರಳಿದ ಮೇಲೆ, ಸುನೀಲ್ ಮನೆಯೊಳಗೆ ಹೋಗಿದ್ದಾನೆ.

ಸ್ವಲ್ಪ ಸಮಯದ ಬಳಿಕ ಅಣ್ಣ ಹಾಗೂ ತಾಯಿ ಒಳಗೆ ತೆರಳಿ ನೋಡಿದಾಗ, ಹಾಲ್‌ನಲ್ಲಿದ್ದ ಕಬ್ಬಿಣದ ರಾಡಿಗೆ ನೈಲಾನ್ ಬೆಡ್‌ಶೀಟ್ ಬಳಸಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದನು.

ಇನ್ನೂ ಸುನೀಲ್ ಅತ್ಯುತ್ತಮ ಕಬ್ಬಡಿ ಆಟಗಾರನಾಗಿದ್ದನು , ಕುಟುಂಬದವರು ನೀಡಿದ ಮಾಹಿತಿಯಂತೆ, ಮದ್ಯಪಾನದ ಅಭ್ಯಾಸವಿದ್ದ ಕಾರಣದಿಂದ ಸುನೀಲ್ ಮಾನಸಿಕವಾಗಿ ಸಮಸ್ಯೆ ಅನುಭವಿಸುತ್ತಿದ್ದನೆಂದು ಹೇಳಲಾಗಿದೆ.

ಈ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author