Headlines

ಯುವತಿ ನಾಪತ್ತೆ : ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಮನವಿ

GridArt 20260321

An 18-year-old girl, Rakshitha G R from Kenchanala village in Hosanagara taluk of Shivamogga district, has gone missing since March 21, 2026. Public requested to share any information.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೆಂಚನಾಳ ಗ್ರಾಮದ ಗೌಡಕೊಪ್ಪ ನಿವಾಸಿಯಾದ ರಕ್ಷಿತಾ ಜಿ.ಆರ್ (18) ಅವರು ಕಾಣೆಯಾಗಿರುವ ಬಗ್ಗೆ ಪ್ರಕರಣ ವರದಿಯಾಗಿದೆ.

ರಕ್ಷಿತಾ ಅವರು ರಂಗನಾಥ್ ಅವರ ಪುತ್ರಿಯಾಗಿದ್ದು, ದಿನಾಂಕ 21.03.2026 ರಂದು ಬೆಳಿಗ್ಗೆ ಸುಮಾರು 11 ಗಂಟೆ ಸುಮಾರಿಗೆ ತಮ್ಮ ಮನೆಯಿಂದ ಹೊರಗೆ ತೆರಳಿದ್ದಾರೆ. ಆದರೆ ಬಳಿಕ ಅವರು ಮನೆಗೆ ಮರಳಿ ಬಾರದ ಕಾರಣ ಕುಟುಂಬದವರು ಆತಂಕಗೊಂಡಿದ್ದಾರೆ.

ಇವರ ಬಗ್ಗೆ ಎಲ್ಲಿಯಾದರೂ ಮಾಹಿತಿ ದೊರಕಿದಲ್ಲಿ ಅಥವಾ ಕಂಡುಬಂದಲ್ಲಿ ತಕ್ಷಣವೇ ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಕುಟುಂಬದವರು ಹಾಗೂ ಸಂಬಂಧಪಟ್ಟವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸಂಪರ್ಕ ಸಂಖ್ಯೆ: 82779 83045

ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ  ದೂರು ಸಲ್ಲಿಕೆಯಾಗಿದ್ದು , ಹುಡುಕಾಟ ಕಾರ್ಯ ಮುಂದುವರೆದಿದೆ.