w
Headlines
Home » ರಾತ್ರೋರಾತ್ರಿ ಸೆಂಟ್ರಿಂಗ್ ಶೀಟ್ ಕಳ್ಳತನ ಪ್ರಕರಣ : ಗುಜರಿ ವ್ಯಾಪಾರಿ ಅರೆಸ್ಟ್ , ಲಕ್ಷಾಂತರ ರೂ ಮೌಲ್ಯದ ವಸ್ತು ಜಪ್ತಿ

ರಾತ್ರೋರಾತ್ರಿ ಸೆಂಟ್ರಿಂಗ್ ಶೀಟ್ ಕಳ್ಳತನ ಪ್ರಕರಣ : ಗುಜರಿ ವ್ಯಾಪಾರಿ ಅರೆಸ್ಟ್ , ಲಕ್ಷಾಂತರ ರೂ ಮೌಲ್ಯದ ವಸ್ತು ಜಪ್ತಿ

Crime 16792811873x2 (1)

Malur police cracked a centering sheet theft case in Tirthahalli taluk by arresting a scrap dealer from Byndoor and recovering iron sheets and a goods vehicle worth lakhs.

ತೀರ್ಥಹಳ್ಳಿ: ತಾಲ್ಲೂಕಿನ ಕೂಡಿಗೆ ಗ್ರಾಮದಲ್ಲಿ ನಡೆದಿದ್ದ ಮನೆ ನಿರ್ಮಾಣ ಸಾಮಗ್ರಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಮಾಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಬೈಂದೂರು ಮೂಲದ ಗುಜರಿ ವ್ಯಾಪಾರಿಯನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಕೂಡಿಗೆ ಗ್ರಾಮದ ಗಬಡಿಯ ಮೇಘರಾಜ್ ಅವರು ತಮ್ಮ ನೂತನ ಮನೆಯ ಎರಡನೇ ಮಹಡಿಯ ಸ್ಲಾಬ್ ಕೆಲಸಕ್ಕಾಗಿ ಸುಮಾರು 45,000 ರೂ. ಮೌಲ್ಯದ 150 ಕಬ್ಬಿಣದ ಸೆಂಟ್ರಿಂಗ್ ಶೀಟ್‌ಗಳನ್ನು ಮನೆಯ ಪಕ್ಕದಲ್ಲೇ ಇಟ್ಟಿದ್ದರು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅಜ್ಞಾತ ಕಿಡಿಗೇಡಿಗಳು ಈ ಶೀಟ್‌ಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಿದ್ದರು. ಈ ಕುರಿತು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಿಖಿಲ್ ಬಿ ಅವರ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಅರವಿಂದ್ ಎನ್ ಕಲಗುಚ್ಚಿ ಹಾಗೂ ಮಾಳೂರು ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಪಿಎಸ್‌ಐ ಸುನೀಲ್ ಬಿ.ಸಿ ಮತ್ತು ತಂಡವು ಕಾರ್ಯಾಚರಣೆ ನಡೆಸಿ, ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಶಿರೂರು ನಿವಾಸಿ ರಶೀದ್ ಅಲಿಯಾಸ್ ಮೊಹಿದ್ದೀನ್ (42) ಎಂಬಾತನನ್ನು ಬಂಧಿಸಿದೆ.

ಬಂಧಿತ ಆರೋಪಿಯಿಂದ ಸುಮಾರು 1,00,000 ರೂ. ಮೌಲ್ಯದ 150 ಕಬ್ಬಿಣದ ಸೆಂಟ್ರಿಂಗ್ ಶೀಟ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 1,00,000 ರೂ. ಮೌಲ್ಯದ ಮಹಿಂದ್ರಾ ಸುಪ್ರಾ ಮ್ಯಾಕ್ಸಿ ಟ್ರಕ್ ಅನ್ನು ಜಪ್ತಿ ಮಾಡಲಾಗಿದೆ.

ತನಿಖೆ ವೇಳೆ ವಶಪಡಿಸಿಕೊಂಡ ಶೀಟ್‌ಗಳಲ್ಲಿ 50 ಶೀಟ್‌ಗಳು ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮತ್ತೊಂದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ್ದವು ಎಂಬುದು ಬೆಳಕಿಗೆ ಬಂದಿದೆ.

ಪೊಲೀಸರು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.