ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆರ್ ಎಂ ಮಂಜುನಾಥ್ ಗೌಡ , ಉಪಾಧ್ಯಕ್ಷರಾಗಿ ಎಸ್ ಕೆ ಮರಿಯಪ್ಪ ಅವಿರೋಧ ಆಯ್ಕೆ | DCC
ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ( ಡಿಸಿಸಿ) ನ ಅಧ್ಯಕ್ಷರಾಗಿ ಆರ್.ಎಂ ಮಂಜುನಾಥಗೌಡ, ಉಪಾಧ್ಯಕ್ಷರಾಗಿ ಎಸ್ ಕೆ ಮರಿಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆರ್ ಎಂ ಮಂಜುನಾಥ ಗೌಡ,ಉಪಾಧ್ಯಕ್ಷ ಸ್ಥಾನಕ್ಕೆ ಎಸ್ ಕೆ ಮರಿಯಪ್ಪ ನಾಮಪತ್ರ ಸಲ್ಲಿಸಿದ್ದು ಇತರೆ ಯಾರೋಬ್ಬರೂ ನಾಮಪತ್ರ ಸಲ್ಲಿಸದೆ ಇರುವುದರಿಂದ ಇವರನ್ನು ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಗಳು ಘೋಷಿಸಿದರು.
ಡಿಸಿಸಿ ಬ್ಯಾಂಕ್ ನಲ್ಲಿ ಒಟ್ಟು 13 ನಿರ್ದೇಶಕರಿದ್ದು 11 ಜನ ನಿರ್ದೇಶಕರು ಕಾಂಗ್ರೆಸ್ ನ ಆರ್ ಎಂ ಮಂಜುನಾಥಗೌಡರ ಬೆಂಬಲಿಗರಾಗಿದ್ದು ಈ ಹಿನ್ನಲೆಯಲ್ಲಿ ಮತ್ಯಾರು ನಾಮಪತ್ರ ಸಲ್ಲಿಸಿಲ್ಲ.